ಅಡುಗೆಯ ರುಚಿ ಹೆಚ್ಚಿಸುವ ಕೆಂಪು ಮೆಣಸಿನ ಪುಡಿಯಲ್ಲಿದೆ ಇಷ್ಟೆಲ್ಲಾ ಆರೋಗ್ಯಕರ ಗುಣಗಳು

ಭಾರತದ ಆಹಾರ ಪದ್ಧತಿ ಅತ್ಯಂತ ವೈವಿದ್ಯಮಯವಾಗಿದೆ. ಇಲ್ಲಿ ಸಿದ್ಧವಾಗುವ ಭಕ್ಷ್ಯಗಳಲ್ಲಿ ಅನೇಕ ರೀತಿಯ ಮಸಾಲೆಗಳನ್ನು ಬಳಸಲಾಗುತ್ತದೆ. ಇವುಗಳಲ್ಲೊಂದು ಕೆಂಪು ಮೆಣಸಿನ ಪುಡಿ. ಖಾರಕ್ಕಿಂತ ಹೆಚ್ಚಾಗಿ ಬಣ್ಣಕ್ಕಾಗಿ ಇದನ್ನು ಪಲ್ಯ, ಗ್ರೇವಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ಅಡುಗೆಯ ರುಚಿ ಹೆಚ್ಚಿಸುವುದರ ಹೊರತಾಗಿ ಕೆಂಪು ಮೆಣಸಿನ ಪುಡಿಯಿಂದ ಇನ್ನೂ ಅನೇಕ ಪ್ರಚಂಡ ಪ್ರಯೋಜನಳಿವೆ. ಸರಿಯಾದ ಪ್ರಮಾಣದಲ್ಲಿ ಮತ್ತು ಆರೋಗ್ಯಕ್ಕೆ ಸೂಕ್ತವಾದ ರೀತಿಯಲ್ಲಿ ಬಳಸಿದರೆ ಕೆಂಪು ಮೆಣಸಿನ ಪುಡಿ ತುಂಬಾ ಉಪಯುಕ್ತವಾಗಿದೆ.  ಹೃದಯಾಘಾತದ ಸಮಯದಲ್ಲಿ ಕೆಂಪು ಮೆಣಸಿನ ಪುಡಿ ಬಹಳಷ್ಟು ಸಹಾಯ ಮಾಡುತ್ತದೆ. ಕೆಂಪು ಮೆಣಸಿನ ಪುಡಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹೃದಯಾಘಾತವಾದ ತಕ್ಷಣ ಒಂದು ಚಮಚ ಕೆಂಪು ಮೆಣಸಿನ ಪುಡಿಯನ್ನು ನೀರಿನಲ್ಲಿ ಕಲಕಿ ಅದನ್ನು ಕುಡಿಸಿದ್ರೆ ಅಪಾಯ ಕಡಿಮೆಯಾಗುತ್ತದೆ ಅಂತ ಸಂಶೋಧನೆಗಳಲ್ಲೇ ಹೇಳಲಾಗಿದೆ. ಕೆಂಪು ಮೆಣಸಿನಕಾಯಿಯಲ್ಲಿ ಪೊಟ್ಯಾಸಿಯಮ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ನಿಮ್ಮ ದೇಹದ ಅಪಧಮನಿಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆಯನ್ನು ಸಹ ಸುಧಾರಿಸುತ್ತದೆ.

ಕೆಂಪು ಮೆಣಸಿನ ಪುಡಿಯನ್ನು ತೂಕ ನಷ್ಟಕ್ಕೆ ಸಹ ಬಳಸಬಹುದು. ಕೆಂಪು ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಹೆಚ್ಚು ಕೊಬ್ಬನ್ನು ಸುಡುವಂತೆ ಮಾಡುತ್ತದೆ. ಆಹಾರದಲ್ಲಿ ನೀವು ಕೆಂಪು ಮೆಣಸಿನ ಪುಡಿಯನ್ನು ಬಳಸಿದರೆ, ಅದರ ಪರಿಣಾಮವು ನಿಮ್ಮ ತೂಕದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

ಕೆಂಪು ಮೆಣಸಿನ ಪುಡಿಯು ತ್ವಚೆಯನ್ನು ಉತ್ತಮವಾಗಿಡಲು ವಿಟಮಿನ್ ಸಿಯನ್ನು ಹೊಂದಿದೆ. ಇದು ಕಾಲಜನ್ ಉತ್ಪಾದನೆಗೆ ಕಾರಣವಾಗುತ್ತದೆ ಮತ್ತು ಕೂದಲು ಆರೋಗ್ಯಕರವಾಗಿರಲು ವಿಟಮಿನ್ ಎ ಕೂಡ ಅಗತ್ಯ. ಈ ಎರಡೂ ವಿಟಮಿನ್‌ಗಳ ಉಪಸ್ಥಿತಿಯು ಕೂದಲು ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು. ಕೆಂಪು ಮೆಣಸಿನ ಪುಡಿ ಬಳಸುವುದರಿಂದ ನಿಮ್ಮ ಕೂದಲನ್ನು ಮೃದುವಾಗಿ ಮತ್ತು ಆರೋಗ್ಯಕರವಾಗಿ ಇರಿಸಬಹುದು. ಚರ್ಮ ಸಹ ಮೊಡವೆ ಮುಕ್ತವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read