ಮಾವಿನ ಹಣ್ಣಿನಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಮಾವಿನ ಹಣ್ಣು ಕೇವಲ ತಿನ್ನುವುದಕಷ್ಟೇ ಅಲ್ಲ, ಇದರ ನಾನಾ ಬಳಕೆ ತ್ವಚೆ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

* ಬೆವರು ಗುಳ್ಳೆಗಳಿಗೆ ಪರಿಹಾರ ಕಂಡು ಕೊಳ್ಳಲು ಮಾವಿನ ತಿರುಳು ಹಾಗೂ ತುಳಸಿ ರಸ ಬೆರೆಸಿ ಮಸಾಜ್‌ ಮಾಡಿ. ಐದು ನಿಮಿಷ ನಂತರ ಮುಖ ತೊಳೆಯಿರಿ ಪರಿಹಾರ ಸಿಗುವುದು.

* ಮಕ್ಕಳಲ್ಲಿ ಕಾಡುವ ಚರ್ಮದ ತುರಿಕೆ ಮತ್ತು ಕಜ್ಜಿಯ ನಿವಾರಣೆಗೆ ಹುಳಿ ಮಾವಿನ ರಸವನ್ನು ಲೇಪಿಸಿದಲ್ಲಿ ಪರಿಹಾರ ದೊರೆಯುತ್ತದೆ.

* ಮಾವಿನ ಹಣ್ಣಿನ ಗೊರಟನ್ನು ಸ್ನಾನ ಮಾಡುವಾಗ ಮೈ ಉಜ್ಜಲು ಬಳಸಿದರೆ ಅನೇಕ ಚರ್ಮ ರೋಗ ನಿವಾರಣೆಯಾಗುತ್ತದೆ ಹಾಗೂ ಬೆವರಿನ ವಾಸನೆಯೂ
ಕಡಿಮೆಯಾಗುತ್ತದೆ.

* ಮಾವಿನ ಹಣ್ಣನ್ನು ಮರದಿಂದ ಕಿತ್ತ ತಕ್ಷಣ ಬರುವ ಅಂಟು ದ್ರವವನ್ನು ಗಜಕರ್ಣ ಹಾಗೂ ಇಸುಬಿಗೆ ಔಷಧಿಯಾಗಿ ಬಳಸಬಹುದು.

* ಕೇವಲ ಚರ್ಮಕ್ಕೆ ಮಾತ್ರವಲ್ಲ, ಮಾವಿನ ಸೇವನೆಯಿಂದ ರಕ್ತಹೀನತೆ, ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ, ಮಲಬದ್ಧತೆ ಹೀಗೆ ಇನ್ನೂ ಅನೇಕ ರೋಗಗಳಿಗೆ ಪರಿಹಾರ ಕಾಣಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read