HomeInternationalBIG NEWS: ಚಿಕ್ಕಬಳ್ಳಾಪುರಕ್ಕೂ ಅಲಿ ಖಮೇನಿಗೂ ಇದೆ ನಂಟು: ಅಲೀಪುರದ 20 ಸಾವಿರ ಜನರಿಗೆ ಅಲಿ...

BIG NEWS: ಚಿಕ್ಕಬಳ್ಳಾಪುರಕ್ಕೂ ಅಲಿ ಖಮೇನಿಗೂ ಇದೆ ನಂಟು: ಅಲೀಪುರದ 20 ಸಾವಿರ ಜನರಿಗೆ ಅಲಿ ಖಮೇನಿ ಧರ್ಮಗುರು

ಚಿಕ್ಕಬಳ್ಳಾಪುರ: ಇಸ್ರೇಲ್ ಹಾಗೂ ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಖನೇನಿಯ ಮಗಳು, ಅಳಿಯ, ಮೊಮ್ಮಕ್ಕಳು ಕೂಡ ದಾಳಿಯಲ್ಲಿ ಬಲಿಯಾಗಿದ್ದಾರೆ. ಇರಾನ್ ನಾಯಕ ಅಲಿ ಖಮೇನಿ ಮೂಲತಃ ಉತ್ತರ ಪ್ರದೇಶದವರೆಂದು ತಿಳಿದುಬಂದಿದೆ. ಅಲಿ ಖಮೇನಿಗೂ ಕರ್ನಾಟಕದ ಚಿಕ್ಕಬಳ್ಳಾಪುರಕ್ಕೂ ಕೂಡ ನಂಟಿದೆ.

ಅಲಿ ಖಮೇನಿ ಹತ್ಯೆ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಹತ್ಯೆ ವಿಚಾರ ಹೊರಬಂದ ಬಳಿಕ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ನಡೆಸಿದ್ದಾರೆ. ಅಲಿಪುರ ಗ್ರಾಮವನ್ನು ‘ಮಿನಿ ಇರಾನ್’ ಎಂದೇ ಕರೆಯಲಾಗುತ್ತದೆ.

1986ರಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರು ಅಲಿಪುರ ಗ್ರಾಮಕ್ಕೆ ಆಗಮಿಸಿದ್ದರು. ಈ ಬಗ್ಗೆ ಸ್ಥಳೀಯರಲ್ಲಿ ನೆನಪು ಇನ್ನೂ ಹಸಿರಾಗಿದೆ. ಗ್ರಾಮದಲ್ಲಿರುವ ಮಸೀದಿಯಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ್ದನ್ನು ಹಿರಿಯರು ಸ್ಮರಿಸುತ್ತಿದ್ದಾರೆ. ಅಲಿಪುರದ ಸುಮಾರು 20 ಸಾವಿರ ಜನರು ಖಮೇನಿ ಅವರನ್ನು ಧರ್ಮಗುರುವೆಂದು ಗೌರವಿಸುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಮೇನಿ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯೂ ಅಲಿಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹತ್ಯೆ ಸುದ್ದಿಯಿಂದ ದುಃಖಿತರಾದ ಶಿಯಾ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ಅಲಿಪುರ ಗ್ರಾಮದಲ್ಲಿ ಬೃಹತ್ ಶೋಕಾಚರಣೆ ಮೆರವಣಿಗೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಸ್ವಯಂಪ್ರೇರಿತ ಬಂದ್ ಜಾರಿಯಲ್ಲಿದ್ದು, ಜನರು ಶಾಂತಿಯುತವಾಗಿ ಶೋಕಾಚರಣೆ ಮಾಡುತ್ತಿದ್ದಾರೆ.

ಇದಲ್ಲದೆ, ಇರಾನ್‌ನಲ್ಲಿ ಸಿಲುಕಿರುವ ತಮ್ಮ ಬಂಧು ಬಳಗ ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಗ್ರಾಮಸ್ಥರು ಪ್ರಾರ್ಥನೆ ಮಾಡಿದ್ದಾರೆ.

ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಇರಾನ್‌ನ ಸರ್ವೋಚ್ಚ ನಾಯಕರಾಗಿ ಸತತ ಅಧಿಕಾರ ಚಲಾಯಿಸಿದ್ದ ಖಮೇನಿ, ಶಿಯಾ ಮುಸ್ಲಿಂ ಸಮುದಾಯದ ಅತ್ಯಂತ ಪ್ರಭಾವಿ ಧರ್ಮಗುರುಗಳಲ್ಲಿ ಒಬ್ಬರಾಗಿದ್ದರು. ಈಗ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ಸೇನಾ ದಾಳಿಯಲ್ಲಿ ಹತರಾಗಿದ್ದಾರೆ. ಖಮೇನಿ ಸಾವಿನ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲಿಗೆ ಸಂದೇಶ ಪ್ರಕಟಿಸಿದ್ದಾರೆ. ನಂತರ ಇರಾನ್ ಮಾಧ್ಯಮಗಳೂ ಖಮೇನಿ ಸಾವನ್ನು ದೃಢಪಡಿಸಿದ್ದವು. ಅಂತಿಮವಾಗಿ ಇರಾನ್ ಸರ್ಕಾರ ಕೂಡ ಸಾವನ್ನು ದೃಢಪಡಿಸಿದ್ದು, ಪ್ರತೀಕಾರ ಕೈಗೊಳ್ಳುವುದಾಗಿ ಶಪಥ ಮಾಡಿದೆ.

ಇನ್ನು ಇರಾನ್ ಮುಂದಿನ ನಾಯಕನ ಆಯ್ಕೆ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಸಂಭಾವ್ಯ ಉತ್ತರಾಧಿಕಾರಿಗಳಲ್ಲಿ, ಖಮೇನಿ ಎರಡನೇ ಮಗ ಮೊಜ್ತಬಾ ಖಮೇನಿ ಅತ್ಯಂತ ಸಂಭಾವ್ಯ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular