
ಕೇರಳ ಮೂಲದ ಉದ್ಯಮಿ ಸುನ್ನಿ ಎಂಬುವವರು ಚೆನ್ನೈನಿಂದ ಮೈಸೂರು ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದ ವೇಳೆ ಮಾನಂದವಾಡಿಯಲ್ಲಿ ಈ ಗ್ಯಾಂಗ್ ಉದ್ಯಮಿಯ ಗಮನ ಸೆಳೆದಿದೆ.
ಇವರ ಮಾತಿಗೆ ಮರುಳಾದ ಉದ್ಯಮಿ ಸುನ್ನಿ ಅವರು ಹೇಳಿದಂತೆ ಮನೆಯೊಂದಕ್ಕೆ ಹೋಗಿದ್ದಾರೆ. ನಂತರ ಮಹಿಳೆ ಉದ್ಯಮಿ ಸುನ್ನಾ ಜೊತೆ ಬೆತ್ತಲಾಗಿ ಮಲಗಿದ್ದಾಳೆ. ನಂತರ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲೆ ಮಾಡಿದ ಗ್ಯಾಂಗ್ 10 ಲಕ್ಷರೂಗೆ ಬೇಡಿಕೆ ಇಟ್ಟಿದ್ದಾರೆ. ಏನೂ ಮಾಡದ ಸ್ಥಿತಿಯಲ್ಲಿ ಸುನ್ನಿ 5 ಲಕ್ಷ ಹಾಗೂ ಉಂಗುರ ಕೊಟ್ಟಿದ್ದಾರೆ. ಹಣ ಪಡೆದ ಗ್ಯಾಂಗ್ ಅಲ್ಲಿಂದ ಪರಾರಿಯಾಗಿದೆ.
ನಂತರ ಸುನ್ನಿ ಅವರು ತಿರುನೆಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ಪೊಲೀಸರು ಪ್ರಕರಣವನ್ನು ಮೈಸೂರು ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಿದ್ದಾರೆ . ಕೂಡಲೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿ ಮುಸ್ಲಿಂ ಮಹಿಳೆ ಮೋನಾ, ಫಜಲುಲ್ಲಾ ರೆಹಮಾನ್, ರಿಜ್ವಾನ್ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

