HomeLatest Newsಮದ್ಯಪಾನ 'ಲಿಮಿಟ್'ನಲ್ಲಿದ್ದರೂ ಡೇಂಜರ್: 28 ವರ್ಷದ ಯುವಕನ ಲಿವರ್ ಶೇ. 100ರಷ್ಟು ಡ್ಯಾಮೇಜ್! ವೈದ್ಯರು ಹಂಚಿಕೊಂಡ...

ಮದ್ಯಪಾನ ‘ಲಿಮಿಟ್’ನಲ್ಲಿದ್ದರೂ ಡೇಂಜರ್: 28 ವರ್ಷದ ಯುವಕನ ಲಿವರ್ ಶೇ. 100ರಷ್ಟು ಡ್ಯಾಮೇಜ್! ವೈದ್ಯರು ಹಂಚಿಕೊಂಡ ಬೆಚ್ಚಿಬೀಳಿಸುವ ಫೋಟೋ

“ಮಿತವಾಗಿ ಮದ್ಯಪಾನ ಮಾಡಿದರೆ ಆರೋಗ್ಯಕ್ಕೆ ಏನೂ ಆಗುವುದಿಲ್ಲ” ಎಂಬುದು ಅನೇಕರ ನಂಬಿಕೆ. ಆದರೆ ಗುಜರಾತ್‌ನ ವಡೋದರಾದ ಖ್ಯಾತ ರೇಡಿಯಾಲಜಿಸ್ಟ್ ಡಾ. ಹರ್ಷ್ ವ್ಯಾಸ್ ಅವರು ಹಂಚಿಕೊಂಡಿರುವ ಒಂದು ವೈದ್ಯಕೀಯ ವರದಿ ಈ ನಂಬಿಕೆಯನ್ನು ಅಕ್ಷರಶಃ ಹುಸಿಗೊಳಿಸಿದೆ. ಕೇವಲ 28 ವರ್ಷದ ಯುವಕನೊಬ್ಬ ಅನಿರೀಕ್ಷಿತವಾಗಿ ಲಿವರ್ ವೈಫಲ್ಯಕ್ಕೆ ಒಳಗಾಗಿರುವ ಘಟನೆ ಈಗ ವೈದ್ಯಕೀಯ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬೆಚ್ಚಿಬೀಳಿಸುವ ಅಲ್ಟ್ರಾಸೌಂಡ್ ರಿಪೋರ್ಟ್ ಡಾ. ಹರ್ಷ್ ವ್ಯಾಸ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಯುವಕನೊಬ್ಬನ ಲಿವರ್ ಸ್ಕ್ಯಾನಿಂಗ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಯುವಕ ದಿನಾಲೂ ಕುಡಿಯುವವನಲ್ಲ, ಬದಲಾಗಿ ಅಪರೂಪಕ್ಕೆ ಒಮ್ಮೆ ಮದ್ಯಪಾನ ಮಾಡುತ್ತಿದ್ದವನು (Occasional Drinker). ಆದರೆ ಆತನ ಲಿವರ್ ಚಿತ್ರಣ ನೋಡಿದರೆ ಅದು ‘ಲಿವರ್ ಸಿರೋಸಿಸ್’ ಎಂಬ ಗುಣಪಡಿಸಲಾಗದ ಮತ್ತು ಕ್ಯಾನ್ಸರ್‌ಗೆ ಮುನ್ನ ಬರುವ ಅಪಾಯಕಾರಿ ಸ್ಥಿತಿಗೆ ತಲುಪಿರುವುದು ಸ್ಪಷ್ಟವಾಗಿದೆ.

ತಾಯಿಯ ಪ್ರಶ್ನೆಗೆ ವೈದ್ಯರ ಬಳಿ ಉತ್ತರವಿರಲಿಲ್ಲ ಈ ಯುವಕನ ಹೊಟ್ಟೆಯಲ್ಲಿ ಅತಿಯಾದ ನೀರು ತುಂಬಿಕೊಂಡಿದ್ದು (Ascites), ತೀವ್ರ ನೋವಿನಿಂದ ಆಸ್ಪತ್ರೆಗೆ ಬಂದಿದ್ದನು. ಈ ವೇಳೆ ಆತನ ತಾಯಿ ವೈದ್ಯರನ್ನು ನೋಡಿ, “ಡಾಕ್ಟರೇ, ನನ್ನ ಮಗ ಗುಣಮುಖನಾಗುತ್ತಾನಲ್ಲವೇ?” ಎಂದು ಕೇಳಿದಾಗ ವೈದ್ಯರು ಮೌನಕ್ಕೆ ಶರಣಾಗಿದ್ದಾರೆ. ಏಕೆಂದರೆ ಈ ಸ್ಥಿತಿಯಲ್ಲಿ ಲಿವರ್ ಕಸಿ (Liver Transplant) ಒಂದೇ ಅಂತಿಮ ದಾರಿಯಾಗಿರುತ್ತದೆ. “ನಾನು ಅಪರೂಪಕ್ಕೆ ಮಾತ್ರ ಕುಡಿಯುತ್ತೇನೆ” ಎಂದು ಹೇಳಿಕೊಳ್ಳುವವರಿಗೂ ಇಂತಹ ಮಾರಕ ಸ್ಥಿತಿ ಬರಬಹುದು ಎಂಬುದು ಇಲ್ಲಿ ಸಾಬೀತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮದ್ಯಪಾನವೆಂಬ ವಿಷದ ಪ್ರಯೋಗ ಬೇಡ ಡಾ. ವ್ಯಾಸ್ ಅವರು ಸಾರ್ವಜನಿಕರಿಗೆ ಕಟುವಾದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. “ನೀವು ಮದ್ಯಪಾನ ಮಾಡುತ್ತಿದ್ದು, ಇದುವರೆಗೆ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ ಎಂದರೆ ನೀವು ಸುರಕ್ಷಿತ ಎಂದರ್ಥವಲ್ಲ. ಬದಲಾಗಿ ಆ ವಿಷ ಇನ್ನೂ ನಿಮ್ಮ ಮೇಲೆ ಕೆಲಸ ಮಾಡಿಲ್ಲ ಎಂದಷ್ಟೇ ಅರ್ಥ. ಯಾರೂ ಕೂಡ ವಿಷದ ಮೇಲೆ ಪ್ರಯೋಗ ಮಾಡಬಾರದು” ಎಂದು ಅವರು ಕಿವಿಮಾತು ಹೇಳಿದ್ದಾರೆ. ಕೇವಲ ಶೋಕಿಗಾಗಿ ಅಥವಾ ಅಪರೂಪಕ್ಕೆ ಕುಡಿಯುವವರೂ ಕೂಡ ತಮ್ಮ ಪ್ರಾಣದ ಮೇಲೆ ಜೂಜಾಡುತ್ತಿದ್ದಾರೆ ಎಂಬ ಸತ್ಯವನ್ನು ಈ ವರದಿ ಬಯಲು ಮಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular