HomeLatest News50 ದಿನ ಪೂರೈಸಿದ ಅಜಯ್ ರಾವ್ ನಟನೆಯ ಚಿತ್ರ 'ಯುದ್ಧ ಕಾಂಡ 2'

50 ದಿನ ಪೂರೈಸಿದ ಅಜಯ್ ರಾವ್ ನಟನೆಯ ಚಿತ್ರ ‘ಯುದ್ಧ ಕಾಂಡ 2’

ಪವನ್ ಭಟ್ ನಿರ್ದೇಶನದ ಅಜಯ್ ರಾವ್ ಅಭಿನಯದ ‘ಯುದ್ಧಕಾಂಡ 2’ ಇದೇ ವರ್ಷ ಏಪ್ರಿಲ್ 18ರಂದು ರಾಜ್ಯಾದ್ಯಂತ ತೆರೆಕಂಡಿತ್ತು ಅಂದುಕೊಂಡಂತೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡ ಈ ಚಿತ್ರ ಇದೀಗ 50 ದಿನಗಳನ್ನು ಪೂರೈಸುವ ಮೂಲಕ ತನ್ನ ನಾಗಲೋಟವನ್ನು ಮುಂದುವರಿಸಿದೆ. ‘ಯುದ್ಧ ಕಾಂಡ’ ಚಿತ್ರ ತಂಡ ಈ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದೆ.

ಶ್ರೀ ಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಶನ್ಸ್ ಮತ್ತು ಅಜಯ್ ರಾವ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಅಜಯ್ ರಾವ್ ಅವರೇ ನಿರ್ಮಾಣ ಮಾಡಿದ್ದು, ಶ್ರೀ ಕ್ರೇಜಿ ಮೈಂಡ್ಜ್ ಅವರ ಸಂಕಲನ, ಹಾಗೂ ಕಾರ್ತಿಕ್ ಶರ್ಮ ಛಾಯಾಗ್ರಹಣವಿದೆ. ಅಜಯ್ ರಾವ್, ಅರ್ಚನಾ ಜೋಯಿಸ್, ಮತ್ತು ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರದಲ್ಲಿದ್ದು, ಹೇಮಂತ್ ಜೋಯಿಸ್ ಅವರ ಸಂಗೀತ ನಿರ್ದೇಶನವಿದೆ.

View this post on Instagram

A post shared by Krishna Ajai Rao (@krishna_ajai_rao)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular