HomeKarnatakaBREAKING : ಏರ್ ಶೋ ಎಫೆಕ್ಟ್ : ಬೆಂಗಳೂರಿನಲ್ಲಿ ಇಂದು ಮತ್ತೆ 4 ಕಿಮೀ...

BREAKING : ಏರ್ ಶೋ ಎಫೆಕ್ಟ್ : ಬೆಂಗಳೂರಿನಲ್ಲಿ ಇಂದು ಮತ್ತೆ 4 ಕಿಮೀ ಟ್ರಾಫಿಕ್ ಜಾಮ್ |Traffic Jam

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ ನಡೆಯುತ್ತಿದ್ದು, ಇಂದಿನಿಂದ ಸಾರ್ವಜನಿಕರ ವೀಕ್ಷಣೆಗೂ ಅವಕಾಶ ಸಿಕ್ಕಿದೆ.

ಈ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಏರ್ ಶೋದತ್ತ ಮುಖ ಮಾಡುತ್ತಿದ್ದಾರೆ. ಪರಿಣಾಮ ಬೆಂಗಳೂರು ಜನರಿಗೆ ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.

ಯಲಹಂಕ ಸಂಪರ್ಕಿಸುವ ರಸ್ತೆಗಳಲ್ಲಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಫ್ಲೈ ಓವರ್ ಮೇಲೆಯೂ ಜಾಮ್, ಫ್ಲೈ ಓವರ್ ಕೆಳಭಾಗದಲ್ಲಿಯೂ ಜಾಮ್ ಆಗಿದ್ದು, ಜನ ಪರದಾಡುವಂತೆ ಆಗಿದೆ. ಏರ್ ಶೋ ಹೋಗುವವರು, ಇನ್ನೊಂದೆಡೆ ನಿತ್ಯದ ಕೆಲಸಕ್ಕೆ ಹೋಗುವವರಿಗೆ ತೊಂದರೆ ಆಗಿದೆ. ಯಲಹಂಕ ಸಂಪರ್ಕಿಸುವ ರಸ್ತೆಗಳಲ್ಲಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಫ್ಲೈ ಓವರ್ ಮೇಲೆಯೂ ಜಾಮ್, ಫ್ಲೈ ಓವರ್ ಕೆಳಭಾಗದಲ್ಲಿಯೂ ಜಾಮ್ ಆಗಿದ್ದು, ಪರದಾಡುವಂತೆ ಆಗಿದೆ. ಏರ್ ಶೋ ಹೋಗುವವರು, ಇನ್ನೊಂದೆಡೆ ನಿತ್ಯದ ಕೆಲಸಕ್ಕೆ ಹೋಗೋರಿಗೆ ತೊಂದರೆ ಆಗಿದೆ ಇದರಿಂದಾಗಿ ಯಲಹಂಕ ಸುತ್ತ ನಾಲ್ಕೈದು ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿದೆ. ಸಂಚಾರಕ್ಕೆ ಅಡಚಣೆ ಹಿನ್ನೆಲೆಯಲ್ಲಿ ಜನರು ಹಿಡಿಶಾಪ ಹಾಕುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular