ಬೆಂಗಳೂರು : ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಗಲಿದ್ದು, ಇಂದಿನಿಂದ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳು ನೆರವೇರಲಿದೆ.
ಸೆ.27 ರಂದು ಬನ್ನಿ ಮಂಟಪದಲ್ಲಿ ಏರ್ ಶೋ ನಡೆಯಲಿದ್ದು, ನೋಡುಗರು ಲೋಹದ ಹಕ್ಕಿಗಳ ಹಾರಾಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಸೆ.27 ರಂದು ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನ ಹಾಗೂ ಸೆ.28 ಮತ್ತು ಸೆ.29 ರಂದು ಸಂಜೆ 6 ಗಂಟೆಗೆ ಡ್ರೋನ್ ಶೋ ನಡೆಯಲಿದೆ.
ಅ.1 ರಂದು ಬನ್ನಿಮಂಟಪದ ಮೈದಾನದಲ್ಲಿ ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನ ಮತ್ತು ಪಂಜಿನ ಕವಾಯತು ಕಾರ್ಯಕ್ರಮ ಜರುಗಲಿದೆ. ಟಿಕೆಟ್ ಮತ್ತು ಪಾಸು ಹೊಂದಿದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. https://mysoredasara.gov.in/en ಮೂಲಕ ಆಸಕ್ತರು ಪಾಸುಗಳನ್ನು ಪಡೆದುಕೊಳ್ಳಬಹುದಾಗಿದೆ.