HomeLatest NewsBIG NEWS: ಏರ್ ಇಂಡಿಯಾದ ಮೂವರು ಅಧಿಕಾರಿಗಳು ಸಸ್ಪೆಂಡ್

BIG NEWS: ಏರ್ ಇಂಡಿಯಾದ ಮೂವರು ಅಧಿಕಾರಿಗಳು ಸಸ್ಪೆಂಡ್

ನವದೆಹಲಿ: ಗುಜರಾತ್ ನ ಅಹಮದಾಅಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ನಡೆದು ಕೆಲ ದಿನಗಳ ಬಳಿಕ ನಾಗರಿಕ ವಿಮಾನಯಾನ ನಿರ್ದೇಶನಾಲಯ ಏರ್ ಇಂಡಿಯಾದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಏರ್ ಇಂಡಿಯಾದ ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಏರ್ ಇಂಡಿಯಾದ ಮೂವರು ಅಧಿಕಾರಿಗಳನ್ನು ಸೇವೆಯಿಂದ ತೆಗೆಯಲಾಗಿದೆ. ಜೂನ್ 20ರಂದು ಡಿಜಿಸಿಎ ತನ್ನ ಆದೇಶದಲ್ಲಿ ಟಾಟಾ ಗ್ರೂಪ್ ಒಡೆತನ ಏರ್ ಇಂಡಿಯಾ ಈ ಅಧಿಕಾರಿಗಳ ವಿರುದ್ಧ ಆಂತರಿಕ ಶಿಸ್ತುಕ್ರಮಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಿತ್ತು.

ಅಹಮದಾಬಾದ್ ವಿಮಾನ ಅಪಘಾತದ ಬಳಿಕ ಏರ್ ಇಂಡಿಯಾದ ಪ್ರಮುಖ ವೇಳಾಪಟ್ಟಿ ಮತ್ತು ಸಿಬ್ಬಂದಿಗಳ ರೋಸ್ಟರಿಂಗ್ ನಲ್ಲಿ ಪದೇ ಪದೇ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾದ ಮೂವರು ಉನ್ನತ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular