HomeKarnatakaವಾಯುಪಡೆ ಸೇರ ಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್: ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆ ...

ವಾಯುಪಡೆ ಸೇರ ಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್: ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆ ನೋಂದಣಿಗೆ ಆಹ್ವಾನ

ಭಾರತೀಯ ವಾಯುಪಡೆಯ ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್‍ಗಳಿಗಾಗಿ ಅಗ್ನಿಪಥ್ ಯೋಜನೆಯಡಿ ವಾಯುಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ನೊಂದಣಿಗೆ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆಯು ದ್ವಿತೀಯ ಪಿ.ಯು.ಸಿ(ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಡಿಪ್ಲೋಮಾ, ಇತರೆ ವಿಷಯಗಳಲ್ಲಿ)ಯಲ್ಲಿ ಶೇ.50 ರಷ್ಟು ಅಂಕ ಮತ್ತು ಇಂಗ್ಲೀಷ್‍ನಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ವಯೋಮಿತಿಯು ಅಭ್ಯರ್ಥಿಯು 2003 ಜೂನ್ 27 ರಿಂದ 2006 ಡಿಸೆಂಬರ್ 27 ರ ನಡುವೆ ಜನಿಸಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಕೊನೆಯ ದಿನ ಆಗಸ್ಟ್ 18 ಆಗಿರುತ್ತದೆ. ಆನ್‍ಲೈನ್ ನೊಂದಣಿಗಾಗಿ https://agnipathvayu.cdac.in ಲಿಂಕ್ ಬಳಸಬಹುದಾಗಿದೆ. ಆನ್‍ಲೈನ್ ಪರೀಕ್ಷೆಯು ಅಕ್ಟೋಬರ್ 13 ರಂದು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.08392-273988 ಅಥವಾ https://careerindianairforce.cdac.in ವೆಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular