HomeLatest NewsAI ಯುವತಿಯನ್ನು ನಿಜವಾದ ಯುವತಿಯೆಂದು ವಿಡಿಯೋ ಕಾಲ್: ಬಟ್ಟೆ ಬಿಚ್ಚಿ 1.53 ಲಕ್ಷ ಹಣ ಕಳೆದುಕೊಂಡ...

AI ಯುವತಿಯನ್ನು ನಿಜವಾದ ಯುವತಿಯೆಂದು ವಿಡಿಯೋ ಕಾಲ್: ಬಟ್ಟೆ ಬಿಚ್ಚಿ 1.53 ಲಕ್ಷ ಹಣ ಕಳೆದುಕೊಂಡ ಯುವಕ

ಬೆಂಗಳೂರು: ಎಐ ಯುವತಿಯನ್ನು ನಿಜವಾದ ಯುವತಿ ಎಂದು ನಂಬಿ ಆಕೆಯ ಮೋಹದ ಬಲೆಗೆ ಬಿದ್ದ ಯುವಕನೊಬ್ಬ ಬಟ್ಟೆ ಬಿಚ್ಚಿ ಪೇಚಿಗೆ ಸಿಲುಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ 26 ವರ್ಷದ ಯುವಕನೊಬ್ಬ ಹ್ಯಾಪನ್ ಡೇಟಿಂಗ್ ಆಪ್ ನಲ್ಲಿ ಖಾತೆ ತೆರೆದಿದ್ದ. ಈ ಖಾತೆಗೆ ಇಶಾನಿ ಎಂಬ ಯುವತಿಯ ಹೆಸರಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಇಬ್ಬರೂ ಮೊಬೈಲ್ ನಂಬರ್ ಶೇರ್ ಮಾಡಿಕೊಂಡು ಖಾಸಗಿ ವಿಚಾರಗಳ ಚಾಟಿಂಗ್ ಮಾಡಿದ್ದಾರೆ. ಕೆಲ ದಿನಗಳ ಬಳಿಕ ಯುವತಿಯ ಮೊಬೈಲ್ ನಂಬರ್ ನಿಂದ ವಿಡಿಯೋ ಕಾಲ್ ವೊಂದು ಬಂದಿದೆ. ಈ ವಿಡಿಯೋ ಕಾಲ್ ನಲ್ಲಿ ಯುವತಿ ಬೆತ್ತಲಾಗಿದ್ದಳು. ಯುವಕನಿಗೂ ಬಟ್ಟೆ ಬಿಚ್ಚುವಂತೆ ಹೇಳಿದ್ದಳು. ಯುವಕ ಅದು ನಿಜವಾದ ಯುವತಿ ಎಂದೇ ನಂಬಿ ಬೆತ್ತಲಾಗಿದ್ದ. ಇದನ್ನು ರೆಕಾರ್ಡ್ ಮಾಡಿಕೊಂಡಿದ್ದ ವಂಚಕರು ವಿಡಿಯೋ ಕಾಲ್ ಬಳಿಕ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದಾರೆ.

ಯುವಕನ ಬೆತ್ತಲೆ ಫೋಟೋಗಳನ್ನು ಕಳುಹಿಸಿ ಬೆದರಿಕೆಯೊಡ್ಡಿ ಹಂತ ಹಂತವಾಗಿ ಹಣ ದೋಚಿದ್ದಾರೆ. ಯುವಕನಿಂದ 1.53 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ಯುವಕ ಹಣ ಕಳೆದುಕೊಂಡರೂ ಬ್ಲ್ಯಾಕ್ ಮೇಲ್ ನಿಂತಿಲ್ಲ. ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಫಜೀತಿಗೆ ಸಿಲುಕಿದ ಯುವಕ ಬೆಂಗಳೂರು ಕೇಂದ್ರ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ತನಿಖೆ ನಡೆಸಿದ ವೇಳೆ ಪೊಲೀಸರಿಗೆ ವಂಚಕರು ಎಐ ಯುವತಿಯ ಮೂಲಕವಾಗಿ ವಂಚಿಸಿದ್ದಾರೆ ಎಂಬುದು ಬಯಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular