HomeLatest NewsBREAKING: ಅಹಮದಾಬಾದ್ ನಲ್ಲಿ ವಿಮಾನ ಪತನ: ಹೊತ್ತಿ ಉರಿದ ಫ್ಲೈಟ್: ಅಕ್ಕಪಕ್ಕದ ಕಟ್ಟಡಕ್ಕೂ ವ್ಯಾಪಿಸಿದ ಬೆಂಕಿ

BREAKING: ಅಹಮದಾಬಾದ್ ನಲ್ಲಿ ವಿಮಾನ ಪತನ: ಹೊತ್ತಿ ಉರಿದ ಫ್ಲೈಟ್: ಅಕ್ಕಪಕ್ಕದ ಕಟ್ಟಡಕ್ಕೂ ವ್ಯಾಪಿಸಿದ ಬೆಂಕಿ

ಅಹಮದಾಬಾದ್: 240ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನವೊಂದು ಗುಜರಾತ್ ನ ಅಹಮದಾಬಾದ್ ನ ಏರ್ ಪೋರ್ಟ್ ಬಳಿ ಪತನಗೊಂಡು, ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದೆ.

ಅಹಮದಾಬಾದ್ ಏರ್ ಪೋರ್ಟ್ ನಿಂದ ಲಂಡನ್ ಗೆ ತೆರಳುತ್ತಿದ್ದ ಬೋಯಿಂಗ್ ವಿಮಾನ ಟೇಕ್ ಆಫ್ ಆದ ಕೆಲ ಕ್ಷಣಗಳಲ್ಲೇ ಮರಕ್ಕೆ ಡಿಕ್ಕಿ ಹೊಡೆದು, ಕಟ್ಟಡಕ್ಕೆ ಗುದ್ದಿ, ನೆಲಕ್ಕೆ ಅಪ್ಪಳಿಸಿದೆ. ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಧಗ ಧಗನೆ ಉರಿಯಲಾರಂಭಿಸಿದೆ. ಒಂದೆಡೆ ಪ್ರಯಾಣಿಕರ, ವಿಮಾನ ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ವಿಮಾನದಿಂದ ವ್ಯಾಪಿಸಿರುವ ಬೆಂಕಿ ಅಕ್ಕಪಕ್ಕದ ಕಟ್ಟಡಕ್ಕೂ ತಗುಲಿದ್ದು, ಕಟ್ಟಡಗಳು ಬೆಂಕಿಗಾಹುತಿಯಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ ಎನ್ನಲಾಗಿದೆ.

https://x.com/hirparadivyesh/status/1933081082381144435?ref_src=twsrc%5Etfw%7Ctwcamp%5Etweetembed%7Ctwterm%5E1933081082381144435%7Ctwgr%5E90f3e647795214aef4d08110ac62c5e38b9f2154%7Ctwcon%5Es1_&ref_url=https%3A%2F%2Fwww.freepressjournal.in%2Findia%2Fbreaking-news-passenger-plane-crashes-near-gujarats-ahmedabad-airport

For Latest News Updates, Join Our Whatsapp Community🚩
RELATED ARTICLES

Most Popular