HomeLatest NewsBIG NEWS: ಏರ್ ಇಂಡಿಯಾ ದುರಂತ: ಮೃತ ಮೆಡಿಕಲ್ ವಿದ್ಯಾರ್ಥಿಗಳ ಕುಟುಂಬಕ್ಕೆ 6 ಕೋಟಿ ನೆರವು...

BIG NEWS: ಏರ್ ಇಂಡಿಯಾ ದುರಂತ: ಮೃತ ಮೆಡಿಕಲ್ ವಿದ್ಯಾರ್ಥಿಗಳ ಕುಟುಂಬಕ್ಕೆ 6 ಕೋಟಿ ನೆರವು ನೀಡಿದ ವೈದ್ಯ

ನವದೆಹಲಿ: ಅಹಮದಾಬಾದ್ ನಲ್ಲಿ ನಡೆದಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸುಮಾರು 275 ಜನರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ 242 ಜನರು ಸಾವನ್ನಪ್ಪಿದ್ದು,ಓರ್ವ ಮಾತ್ರ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ. ವಿಮಾನ ಬಿ.ಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಹಾಗೂ ಕಾಲೇಜಿನ ಮೇಲೆ ಅಪ್ಪಳಿಸಿದ್ದ ಪರಿಣಾಮ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 34 ಜನರು ಮೃತಪಟ್ಟಿದ್ದರು.

ಏರ್ ಇಂಡಿಯಾ ಮಾಲಿಕತ್ವದ ಟಾಟಾ ಗ್ರೂಪ್ ಹಾಗೂ ಏರ್ ಇಂಡಿಯಾ ಸಂಸ್ಥೆ ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಯುಎಇ ವೈದ್ಯರೊಬ್ಬರು ಮೃತರ ಕುಟುಂಬಗಳಿಗೆ ನೆರವಿಗೆ ಧಾವಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುಎ ಇ ವೈದ್ಯ ಡಾ.ಶಂಶೀರ್ ವಯಲಿಲ್ ಮೃತ ಮೆಡಿಕಲ್ ವಿದ್ಯಾರ್ಥಿಗಳ ಕುಟುಂಬಕ್ಕೆ ಹಾಗೂ ಗಾಯಾಳುಗಳ ಚಿಕಿತ್ಸೆಗಾಗಿ 6 ಕೋಟಿ ರೂಪಾಯಿ ನೀಡಿದ್ದಾರೆ.

ಏರ್ ಇಂಡಿಯಾ ಅಪಘಾತದ ಬಳಿಕ ಹಾನಿಗೊಳಗಾದ ಬಿ.ಜೆ.ವೈದ್ಯಕೀಯ ಕಾಅಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡಿವೆ. ಈ ನಿಟ್ತಿನಲ್ಲಿ ಯುಎಇ ವೈದ್ಯ ಡಾ.ಶಂಶೀರ್ ವಯಲಿಲ್ ಚೆಕ್ ಗಳನ್ನು ಡೀನ್ ಮತ್ತು ಜೂನಿಯರ್ ವೈದ್ಯರ ಸಂಘದ ಸಮ್ಮುಖದಲ್ಲಿ ವಿತರಿಸಲಾಯಿತು.

For Latest News Updates, Join Our Whatsapp Community🚩
RELATED ARTICLES

Most Popular