ದಾವಣಗೆರೆ: ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ.
ಸಿಗ್ನಲ್ ರೆಜಿಮೆಂಟ್ ನಲ್ಲಿ ಯುಹೆಚ್‍ಕ್ಯೂ ಕೋಟಾದಡಿಯಲ್ಲಿ ವಯಸ್ಸು 17.6 ವರ್ಷದಿಂದ 22 ವರ್ಷದೊಳಗಿನ ವೀರ ನಾರಿಯರು, ಸೈನಿಕರು, ಮಾಜಿ ಸೈನಿಕರ ಮಕ್ಕಳಿಗೆ ಮತ್ತು ಸೈನಿಕರ ಸ್ವಂತ ತಮ್ಮಂದಿರುಗಳಿಗೆ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ಟ್ರೇಡ್ಸ್ಮನ್, ಅಗ್ನಿವೀರ್ ಜನರಲ್ ಡುಟಿ, ಮತ್ತು ಅಗ್ನಿವೀರ್ ಟೆಕ್ನಿಕಲ್‍ಗಳಿಗಾಗಿ ಆಗಸ್ಟ್ 18 ರಿಂದ 21 ರವರೆಗೆ ನೇಮಕಾತಿ ನಡೆಯಲಿದೆ.
ಅರ್ಹತೆಯುಳ್ಳ ಆಸಕ್ತರು ಆಗಸ್ಟ್ 18 ರಂದು ಬೆಳಿಗ್ಗೆ 5 ಗಂಟೆಗೆ ಬಾಯ್ಸ್ ಸ್ಪೋಟ್ರ್ಸ್ ಕಂಪನಿ ಮೈದಾನ, ಜಬಲ್ಪುರ್ ರಸ್ತೆ, ಜಬಲ್ಪುರ್, ಮಧ್ಯಪ್ರದೇಶ ಇಲ್ಲಿ ಹಾಜರಾಗಬೇಕೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

