HomeKarnatakaಅಘನಾಶಿನಿ ನದಿಯಲ್ಲಿ ದುರಂತ: ಗ್ರಾಮ ಪಂಚಾಯಿತಿ ಸದಸ್ಯ ನೀರು ಪಾಲು

ಅಘನಾಶಿನಿ ನದಿಯಲ್ಲಿ ದುರಂತ: ಗ್ರಾಮ ಪಂಚಾಯಿತಿ ಸದಸ್ಯ ನೀರು ಪಾಲು

ಕಾರವಾರ: ಅಘನಾಶಿನಿ ನದಿಯಲ್ಲಿ ಮುಳುಗಿ ಗ್ರಾಮಪಂಚಾಯಿತಿ ಸದಸ್ಯರೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಸಮೀಪ ನಡೆದಿದೆ.

ದಾವೂದ್ ಘಾರಿಯಾ (67) ಮೃತ ದುರ್ದೈವಿ. ಬರ್ಗಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು. ಮೀನು ಹಿಡಿಯಲೆಂದು ಅಘನಾಶಿನಿ ನದಿಗೆ ಇಳಿದಿದ್ದಾಗ ಆಕಸ್ಮಿಕವಾಗಿ ನದಿಯಲ್ಲಿ ಬಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular