HomeEntertainmentಯಶ್ ಫ್ಯಾನ್ಸ್ ದುರಂತ ಸಾವಿನ ಬಳಿಕ ಅಭಿಮಾನಿಗಳಿಗೆ ನಟ 'ದುನಿಯಾ ವಿಜಯ್' ವಿಶೇಷ ಮನವಿ

ಯಶ್ ಫ್ಯಾನ್ಸ್ ದುರಂತ ಸಾವಿನ ಬಳಿಕ ಅಭಿಮಾನಿಗಳಿಗೆ ನಟ ‘ದುನಿಯಾ ವಿಜಯ್’ ವಿಶೇಷ ಮನವಿ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅವರ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿತ್ತು. ಹುಟ್ಟು ಹಬ್ಬದ ವೇಳೆ ನಡೆದ ಈ ದುರಂತಕ್ಕೆ ನಟ ಯಶ್ ಮರುಗಿದ್ದರು . ಕೂಡಲೇ ಶೂಟಿಂಗ್ ಸ್ಥಗಿತಗೊಳಿಸಿ ಗ್ರಾಮಕ್ಕೆ ಬಂದು ಮೃತಪಟ್ಟ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.

ಈ ಬಳಿಕ ನಟ ದುನಿಯಾ ವಿಜಯ್ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಈ ಬಾರಿ ವಿಜಯ್ ತನ್ನ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ  ಜನವರಿ 20 ರಂದು  ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆ ಮಾತನಾಡಿದ ದುನಿಯಾ ವಿಜಯ್ ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಯಾರು ನನ್ನ ಹುಟ್ಟುಹಬ್ಬದ ದಿನ ಫ್ಲೆಕ್ಸ್ ಬ್ಯಾನರ್ ಹಾಕಬೇಡಿ… ಯಾರೂ ಕೂಡ ಈ ಬಾರಿ ನಡೆದುಕೊಂಡು ಬರಬೇಡಿ, ಕೇಕ್ ಮತ್ತು ಹೂವಿನ ಹಾರ ತರಬೇಡಿ. ನನಗೆ ನಿಮ್ಮ ಜೊತೆಗೆ ಕುಳಿತು ಪ್ರೀತಿಯಿಂದ ಊಟ ಮಾಡುವ ಆಸೆಯಿದೆ ಎಂದು ಹೇಳಿದ್ದಾರೆ.

ಈ ಬಾರಿ ವಿಜಯ್ ತನ್ನ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಅಲ್ಲಿಯೇ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular