ಹಾವೇರಿ : ನಿಶ್ಚಿತಾರ್ಥದ ಬಳಿಕ ಮದುವೆಯಾಗಲು ಒಲ್ಲೆ ಎಂದ ಯುವತಿಗೆ ಮಾವನೇ ವಿಷ ಕುಡಿಸಿ ಹತ್ಯೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ಬಳಿ ನಡೆದಿದೆ.
ಕೊಲೆಯಾದ ಯುವತಿಯನ್ನು ದೀಪಾ ಗೊಂದಿ (21) ಎಂದು ಗುರುತಿಸಲಾಗಿದೆ. ಮಾಲತೇಶ್ ಬಾರ್ಕಿ (35) ಎಂಬಾತ ಕೊಲೆ ಮಾಡಿದ ಹಂತಕ.
ಏನಿದು ಘಟನೆ
ಕೆಲವು ದಿನಗಳ ಹಿಂದೆ ಆರೋಪಿ ಮಾಲತೇಶ್ ಸೊಸೆ ದೀಪಾಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಆದರೆ ನಿಶ್ಚಿತಾರ್ಥ ಆದ ಬಳಿಕ ಮಾವನನ್ನು ಮದುವೆಯಾಗಲು ಯುವತಿ ಒಲ್ಲೆ ಎಂದಿದ್ದಳು. ಇದರಿಂದ ಸಿಟ್ಟಾದ ಮಾಲತೇಶ್ ಯುವತಿಯನ್ನು ತೋಟವೊಂದಕ್ಕೆ ಕರೆದುಕೊಂಡು ಹೋಗಿ ವಿಷ ಕುಡಿಸಿದ್ದಾನೆ ಬಳಿಕ ನೇಣು ಬಿಗಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಾಲತೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

