‘ಬಿಗ್ ಬಾಸ್’ ಬಳಿಕ ಮತ್ತೊಂದು ರಿಯಾಲಿಟಿ ಶೋಗೆ ಆಯ್ಕೆಯಾದ ‘ಡ್ರೋನ್ ಪ್ರತಾಪ್’..!

ಬೆಂಗಳೂರು : ‘ಬಿಗ್ ಬಾಸ್’-10 ರಿಯಾಲಿಟಿ ಶೋ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಡ್ರೋನ್ ಪ್ರತಾಪ್ ಇದೀಗ ಮತ್ತೊಂದು ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ.

ಹೌದು, ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿಗಿಲಿಗಿಲಿ ರಿಯಾಲಿಟಿ ಶೋ ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಡ್ರೋನ್ ಪ್ರತಾಪ್ ಕಾರ್ಯಕ್ರಮದ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿದ್ದಾರೆ. ಇಂದಿನಿಂದ ರಿಯಾಲಿಟಿ ಶೋ ಚಿತ್ರೀಕರಣ ಆರಂಭವಾಗಿದೆ.

ಡ್ರೋನ್ ಪ್ರತಾಪ್ ಜೊತೆಗೆ ತುಕಾಲಿ ಸಂತೋಷ್, ಮೈಕಲ್ ಮತ್ತು ಇಶಾನಿ ಕೂಡ ಗಿಚ್ಚಿಗಿಲಿಗಿಲಿಯಲ್ಲಿ ಭಾಗವಹಿಸಲಿದ್ದಾರೆ ಎಂಬುದು ಸದ್ಯದ ಹೊಸ ವಿಚಾರವಾಗಿದೆ. ಬಿಗ್ ಬಾಸ್ ಮೂಲಕ ಮತ್ತಷ್ಟು ಫೇಮಸ್ ಆದ ಡ್ರೋನ್ ಪ್ರತಾಪ್ ಹೊಸ ರಿಯಾಲಿಟಿ ಶೂ ಮೂಲಕ ಮತ್ತೆ ಎಲ್ಲರನ್ನು ರಂಜಿಸಲಿದ್ದಾರೆ. ಬಿಗ್ ಬಾಸ್ -10 ರಲ್ಲಿ ಕಾರ್ತಿಕ್ ವಿನ್ನರ್ ಆಗಿ ಹೊರ ಹೊಮ್ಮಿದ್ರೆ, ಡ್ರೋನ್ ಪ್ರತಾಪ್ ಮೊದಲ ರನ್ನರ್ ಅಪ್ ಆಗಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read