ದಾರಿ ತಪ್ಪಿದ ಮಹಿಳೆಯಿಂದ ಘೋರ ಕೃತ್ಯ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪುತ್ರನ ಕೊಲೆ

ಬಳ್ಳಾರಿ: ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣಕಲ್ಲು ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದ 14 ವರ್ಷದ ಬಾಲಕ ವಿಠಲನ ಸಾವು ಹೊಸ ತಿರುವು ಪಡೆದುಕೊಂಡಿದೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಿದ್ದ ಪುತ್ರನನ್ನು ತಾಯಿಯೇ ಕೊಲೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಪ್ರಿಯಕರ ಮತ್ತು ಆತನ ಸ್ನೇಹಿತನ ನೆರವು ಪಡೆದು ಮಹಿಳೆ ಪುತ್ರನನ್ನು ಕೊಲೆ ಮಾಡಿಸಿದ್ದಾಳೆ. ಹೂವಿನಹಡಗಲಿಯ ಇಟ್ಟಿಗಿ ಗ್ರಾಮದಲ್ಲಿ ಕಳೆದ ಶನಿವಾರ ನಾಪತ್ತೆಯಾಗಿದ್ದ ಬಾಲಕ ವಿಠಲನ ಶವ ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣಕಲ್ಲು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಪುತ್ರ ನಾಪತ್ತೆಯಾದ ಬಗ್ಗೆ ಬಾಲಕನ ತಾಯಿ ದೂರು ನೀಡಿದ್ದಳು. ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ಜಾಡು ಹಿಡಿದು ಕೊಲೆ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಬಾಲಕನ ತಾಯಿ ಮತ್ತು ಮಲ್ಲಪ್ಪ ಅಕ್ರಮ ಹೊಂದಿದ್ದು, ಈ ಬಗ್ಗೆ ತಾಯಿಯೊಂದಿಗೆ ವಿಠಲ ಜಗಳವಾಡಿದ್ದ. ಇದನ್ನು ಸಹಿಸದೆ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read