ಆನೆಯ ಪುಟ್ಟ ಸಂಸಾರದ ವಿಡಿಯೋ ವೈರಲ್​: ಮರಿಗಳ ತುಂಟಾಟಕ್ಕೆ ನೆಟ್ಟಿಗರು ಫಿದಾ

ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಸುಪ್ರಿಯಾ ಸಾಹು ಅವರು ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಯ ಸಂಸಾರದ ಕ್ಯೂಟ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಆನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರಿ ಆನೆ ಮತ್ತು ಅದರ ಕುಟುಂಬವನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಮರಿಯಾನೆಗಳು ಸಂತೋಷದಿಂದ ಓಡುತ್ತಿರುವುದನ್ನು ಮತ್ತು ತನ್ನ ಹೆತ್ತವರ ಕಾವಲು ಕಣ್ಣುಗಳ ಅಡಿಯಲ್ಲಿ ಇರುವುದನ್ನು ನೋಡಬಹುದಾಗಿದೆ.

“ನಮ್ಮ ಅನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಈ ಕುಟ್ಟಿ (ಮರಿ) ಆನೆಯು ತನ್ನ ಹೆತ್ತವರ ಕಣ್ಗಾವಲಿನಲ್ಲಿ ತನ್ನ ಹೊಸ ಜಗತ್ತನ್ನು ಅನ್ವೇಷಿಸುತ್ತಿದೆ. ಇದು ಅತ್ಯಂತ ಅದ್ಭುತ” ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊವನ್ನು ಇದಾಗಲೇ 50 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಮರಿ ಆನೆಗೆ ಫಿದಾ ಆಗಿರುವ ಹಲವಾರು ಕಮೆಂಟ್​ಗಳು ಬರುತ್ತಿವೆ.

https://twitter.com/supriyasahuias/status/1620720532412063745?ref_src=twsrc%5Etfw%7Ctwcamp%5Etweetembed%7Ctwterm%5E1620720532412063745%7Ctwgr%5Eea9bbfc7cbb046f15cb22f115ddb09b5b38635a9%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fadorable-video-shows-baby-elephant-exploring-its-surroundings-at-tiger-reserve-3748097

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read