ಪುಟ್ಟ ಮಕ್ಕಳಿಗೆ ಮುಳುವಾಗಬಹುದು ಆಕರ್ಷಕ ಆಟಿಕೆಗಳು

ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಬಹುತೇಕ ತಿನಿಸುಗಳ ಪ್ಯಾಕೆಟ್ ಗಳಲ್ಲಿ ವಿವಿಧ ರೀತಿಯ ಆಟಿಕೆಗಳನ್ನು ಇಟ್ಟಿರುತ್ತಾರೆ. ಚಿಕ್ಕ ಗಾತ್ರದ ಆಕರ್ಷಕವಾದ ಇಂತಹ ವಸ್ತುಗಳನ್ನು ಮಕ್ಕಳು ಇಷ್ಟಪಡುತ್ತಾರೆ.

ಆದರೆ, ಇದೂ ಕೂಡ ತಿನ್ನುವ ಪದಾರ್ಥವಿರಬಹುದೆಂದು ಕೆಲವೊಮ್ಮೆ ತಿನ್ನುವ ಸಾಧ್ಯತೆ ಕೂಡ ಇರುತ್ತದೆ. ಆಟಿಕೆಗಳು ಮಕ್ಕಳನ್ನು ಕೊಲ್ಲುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ಹಿಂದೆ ಮುಂಬೈ ಬಾಲಕ ಚಿಪ್ಸ್ ಪ್ಯಾಕೆಟ್ ನಲ್ಲಿದ್ದ ರಬ್ಬರ್ ಮಾದರಿಯ ಆಟಿಕೆ ನುಂಗಿದ ಕಾರಣ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವಿಗೆ ಕಾರಣವಾಗಿತ್ತು.

ಮಕ್ಕಳಿಗೆ ಚಿಪ್ಸ್ ಪ್ಯಾಕೆಟ್ ಕೊಡಿಸಿದಾಗ, ಅದರಲ್ಲಿ ಆಟಿಕೆ ಇದೆಯೇ ಎಂಬುದನ್ನು ಪರೀಕ್ಷಿಸಿ. ಆಟಿಕೆ ಖರೀದಿಸಿದಾಗ, ಪ್ಯಾಕೆಟ್ ಮೇಲೆ ವಯಸ್ಸಿನ ನಿರ್ದಿಷ್ಟತೆ ಬಗ್ಗೆ ತಿಳಿಯಿರಿ. 3 ವರ್ಷ ವಯಸ್ಸಿನ ಮಕ್ಕಳು ಆಟಿಕೆ ವಸ್ತು, ಅದರ ಭಾಗಗಳನ್ನು ಬಾಯಿಗಿಟ್ಟುಕೊಳ್ಳುವ ಸಾಧ್ಯತೆ ಇರುತ್ತದೆ.

ಮಕ್ಕಳು ಆಟವಾಡುವಾಗ ಆಗಾಗ ಗಮನಹರಿಸಿ. ಮಗು ಕೆಮ್ಮಿದಾಗ, ಅತ್ತಾಗ ಏನಾದರೂ ನುಂಗಿದೆಯೇ ಎಂಬುದನ್ನು ನೋಡಿ. ಏನಾದರೂ ತೊಂದರೆ ಇದೆ ಅನಿಸಿದಲ್ಲಿ ವೈದ್ಯರ ಬಳಿಗೆ ಕರೆದೊಯ್ಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read