HomeKarnatakaಕೊಟ್ಟ ಕೆಲಸ ಮಾಡದ 'ಅಡ್ಜಸ್ಟ್ ಮೆಂಟ್' ಗಿರಾಕಿಗಳು ತಮ್ಮ ತಪ್ಪನ್ನು ಮರೆಮಾಚಲು ನನ್ನ ಹೆಸರು ತಳುಕು...

ಕೊಟ್ಟ ಕೆಲಸ ಮಾಡದ ‘ಅಡ್ಜಸ್ಟ್ ಮೆಂಟ್’ ಗಿರಾಕಿಗಳು ತಮ್ಮ ತಪ್ಪನ್ನು ಮರೆಮಾಚಲು ನನ್ನ ಹೆಸರು ತಳುಕು ಹಾಕುತ್ತಿದ್ದಾರೆ: ಯತ್ನಾಳ್ ಆಕ್ರೋಶ

ಕೈಲಾಗದವನಿಗೆ ಕತ್ತೆ ಹೊರುವ ಕೆಲಸ ಎಂಬಂತೆ ಕೊಟ್ಟ ಕೆಲಸ ಮಾಡದ ಅಡ್ಜಸ್ಟ್ ಮೆಂಟ್’ ಗಿರಾಕಿಗಳು ತಮ್ಮ ತಪ್ಪನ್ನು ಮರೆಮಾಚಲು ನನ್ನ ಹೆಸರು ತಳುಕು ಹಾಕುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಡಲಾರದವನು ಮದ್ದಲೆ ತಿಂದ ಎಂಬಂತೆ ವಿಧಾನ ಪರಿಷದ್ ಚುನಾವಣೆಯ ಹೀನಾಯ ಸೋಲಿನಿಂದ ನಗೆಪಾಟಲಾಗಿರುವ ರಾಜ್ಯಾಧ್ಯಕ್ಷರ ತಂಡವು ನಾನು ಕಾಂಗ್ರೆಸ್ ಗೆ ಮತ ಚಲಾಯಿಸಿದ್ದೇನೆ ಎಂಬ ಸುಳ್ಳನ್ನು ಜಾಲತಾಣಗಳಲ್ಲಿ ಹರಿಬಿಡುತ್ತಿದೆ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ತಮಗೆ ನೀಡಿದ ಜವಾಬ್ದಾರಿಯಲ್ಲಿ ವಿಫಲರಾದ ‘ಅಡ್ಜಸ್ಟ್ಮೆಂಟ್’ ಗಿರಾಕಿಗಳು ತಮ್ಮ ತಪ್ಪನ್ನು ಮರೆಮಾಚಲು ನನ್ನ ಹೆಸರು ತಳುಕು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

ಕೈಲಾಗದವನಿಗೆ ಕತ್ತೆ ಹೊರುವ ಕೆಲಸ ಎಂಬ ಗಾದೆ ಮಾತಂತೆ ಕೊಟ್ಟ ಕೆಲಸವನ್ನು ಮಾಡದೆ ಬೇರೆ ನಾಯಕರ ಮೇಲೆ ತಪ್ಪು ಹೊರೆಸುವ ಕಾಯಕದಲ್ಲಿ ಅಡ್ಜಸ್ಟ್ಮೆಂಟ್ ಗಿರಾಕಿಗಳು ನಿರತರಾಗಿದ್ದಾರೆ ಎಂದು ಟೀಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪರ ಮತ ಚಲಾಯಿಸಿರುವುದಿಲ್ಲ. ಭಾರತೀಯ ಜನತಾ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿರುವ ನಾನು ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುತ್ತೇನೆ. ಕೆಲಸವಿಲ್ಲದ ಕೆಲ ತಿಳಿಗೇಡಿಗಳು ಹಾಗೂ ಅವರ ಪಟಾಲಂ ಮಾಡುತ್ತಿರುವ ಆಪಾದನೆಗಳು ಸತ್ಯಕ್ಕೆ ದೂರವಾದದ್ದು.

ಅದಕ್ಷತೆ, ಸ್ವಜಪಕ್ಷಪಾತ, ರಾಜ್ಯ ಬಿಜೆಪಿ ನಾಯಕರಲ್ಲಿ ಸಮನ್ವಯದ ಕೊರತೆ, ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ಬಿಜೆಪಿಗೆ ಸೋಲಾಗಿದೆ. ಮೀರ್ ಸಾದಿಕ್ ಗಳು ಪಕ್ಷದಲ್ಲೇ ಇದ್ದಾರೆ. ಬೇರೆಯವರ ಮೇಲೆ ಬೊಟ್ಟು ತೋರಿಸುತ್ತಿರುವ ನಾಯಕರಿಂದಲೇ ಪಕ್ಷ ಇಂದು ಸೋಲಿನ ಮೇಲೆ ಸೋಲು ಕಾಣುತ್ತಿದೆ. ಬೇರೆಯವರ ಮೇಲೆ ಬೊಟ್ಟು ತೋರಿಸುವ ಮುನ್ನ ಪಕ್ಷವನ್ನು ಸೋಲಿಸಿದ ನಯವಂಚಕರು ಯಾರು ಮತ್ತು ಅವರ ಬೆನ್ನ ಹಿಂದೆ ಇದ್ದವರ್ಯಾರು ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಯತ್ನಾಳ್ ತಿರುಗೇಟು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular