ಮುಂಬೈ: ಸೈಫ್ ಅಲಿ ಖಾನ್ ಅವರ ಸಹೋದರಿ ಸೋಹಾ ಅಲಿ ಖಾನ್ ಮತ್ತು ನಟ ಕುನಾಲ್ ಖೇಮು 2009 ರಿಂದ ಜೊತೆಯಾಗಿದ್ದಾರೆ. ಮುದ್ದಾದ ಮಗಳು ಇನಾಯಾ ನೌಮಿ ಒಂದಿಗೆ ಮುಂಬೈನ ಖಾರ್‌ನಲ್ಲಿ ಸಮುದ್ರದ ಕಡೆಗೆ ಮುಖಮಾಡಿರುವ 9 ಕೋಟಿ ರೂಪಾಯಿ ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದಾರೆ. ವಿಶೇಷವೆಂದರೆ ಈ ಮನೆಯನ್ನು ಸೋಹಾ ಅವರ ತಾಯಿ ಶರ್ಮಿಳಾ ಟ್ಯಾಗೋರ್ ಅವರು ವಿವಾಹದ ಉಡುಗೊರೆಯಾಗಿ ನೀಡಿದ್ದಾರೆ. ಶರ್ಮಿಳಾ ಟ್ಯಾಗೋರ್ ಹಾಗೂ ಕ್ರಿಕೆಟ್ ದಂತಕಥೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಪುತ್ರಿಯಾಗಿರುವ ಸೋಹಾ, ತಮ್ಮ ಪತಿ ಮತ್ತು ಮುದ್ದಿನ ನಾಯಿ ಮಸ್ತಿಯೊಂದಿಗೆ ಈ ಮನೆಯ ಅನೇಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಸೋಹಾ ಅಲಿ ಖಾನ್ ಅವರ ಅಪಾರ್ಟ್‌ಮೆಂಟ್ ಮುಂಬೈನ ಲಿಂಕಿಂಗ್ ರಸ್ತೆಯ ಬಳಿಯ ಸುಂದರ ವಿಲ್ಲಾದಲ್ಲಿದೆ. 9 ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಲ್ಲಿರುವ ಈ ಮನೆಯ ಮೌಲ್ಯ ಸುಮಾರು 9 ಕೋಟಿ ರೂಪಾಯಿ. ಇದನ್ನು ಶರ್ಮಿಳಾ ಟ್ಯಾಗೋರ್ ಅವರು ಸೋಹಾ ಮತ್ತು ಕುನಾಲ್ ಅವರ ವಿವಾಹದಂದು ಉಡುಗೊರೆಯಾಗಿ ನೀಡಿದ್ದರು.
ಅವರ ಲಿವಿಂಗ್ ರೂಮ್ ಆಪ್ತವಾದ ಟೀ ಪಾರ್ಟಿಗಳನ್ನು ಆಯೋಜಿಸಲು ಸೂಕ್ತವಾಗಿದೆ. ಈ ಆರಾಮದಾಯಕ ಸ್ಥಳವು ವಿಚಿತ್ರವಾದರೂ ಸೊಗಸಾದ ವಿನ್ಯಾಸ ಅಂಶಗಳನ್ನು ಒಳಗೊಂಡಿದೆ. ಮರದ ನೆಲಹಾಸಿನಿಂದ ಹಿಡಿದು ಸೀಲಿಂಗ್ ವರೆಗೆ ಹೆಚ್ಚಾಗಿ ಮರವನ್ನು ಬಳಸಲಾಗಿದೆ. ಮನೆಯಲ್ಲಿ ಓದುವುದು ಅಥವಾ ನೆಟ್‌ಫ್ಲಿಕ್ಸ್ ವೀಕ್ಷಣೆಗಾಗಿ ಒಂದು ವಿಶೇಷವಾದ ಮನರಂಜನಾ ಕೊಠಡಿಯಿದೆ. ಹಳೆಯ ಕಾಲದ ಮೋಡಿಯನ್ನು ಹೊಮ್ಮಿಸುವ ಅಧ್ಯಯನ ಕೊಠಡಿಯು ಬೆಚ್ಚಗಿನ ಬೆಳಕು, ಆರಾಮದಾಯಕವಾದ ಸೋಫಾಗಳು ಮತ್ತು ಪುಸ್ತಕಗಳಿಂದ ತುಂಬಿದ ಕಪಾಟುಗಳನ್ನು ಹೊಂದಿದೆ.
ಲಿವಿಂಗ್ ರೂಮ್‌ನಲ್ಲಿರುವ ನೇಯ್ದ ಹತ್ತಿ ಮತ್ತು ತೇಗದ ಮರದಿಂದ ಮಾಡಿದ ಸುಂದರವಾದ ತೂಗು ಕುರ್ಚಿ ಮತ್ತು ಕೈಯಿಂದ ಹೆಣೆದ ಗುಲಾಬಿ ಬಣ್ಣದ ಪೌಫ್ ಗಮನ ಸೆಳೆಯುತ್ತದೆ. ಸಮಕಾಲೀನ ಪೀಠೋಪಕರಣಗಳು ಮತ್ತು ಹಳೆಯ ವಸ್ತುಗಳ ಸಂಗ್ರಹದೊಂದಿಗೆ ಮನೆಯು ಸಾಮರಸ್ಯವನ್ನು ಹೊಂದಿದೆ.