HomeEntertainmentನಟಿ ಸಂಜನಾ ಆನಂದ್ ಗ್ಲಾಮರಸ್ ಫೋಟೋ ಶೂಟ್

ನಟಿ ಸಂಜನಾ ಆನಂದ್ ಗ್ಲಾಮರಸ್ ಫೋಟೋ ಶೂಟ್

ಸ್ಯಾಂಡಲ್ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸಕ್ಕತ್ ಬಿಜಿಯಾಗಿರುವ ನಟಿ ಸಂಜನಾ ಆನಂದ್ ತಮ್ಮ ಫೋಟೋಶೂಟ್ ಗೂ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ.

ಸಂಜನಾ ಆನಂದ್ ಇತ್ತೀಚಿಗಷ್ಟೇ ಫೋಟೋಶೂಟ್ ಮಾಡಿಸಿದ್ದು ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. instagram ನಲ್ಲಿ ಹಂಚಿಕೊಂಡಿರುವ ಈ ಫೋಟೋಗಳಿಗೆ ಲೈಕ್ಸ್ ಮತ್ತು ಕಾಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿದೆ.

2019 ರಂದು ತೆರೆಕಂಡಿದ್ದ ಕುಮಾರ್ ಎಲ್ ನಿರ್ದೇಶನದ  ‘ಕೆಮಿಸ್ಟ್ರಿ ಆಫ್ ಕಾರಿಯಪ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಇವರು ಕಳೆದ ವರ್ಷದಿಂದ ಬೇಡಿಕೆಯ ನಟಿಯಾಗಿದ್ದಾರೆ. ನಟಿ ಸಂಜನಾ ಆನಂದ್ ಕಳೆದ  ವರ್ಷ ‘ಸೂತ್ರದಾರಿ’ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು, ಇತ್ತೀಚೆಗೆ ‘ರಾಯಲ್’ ಸೇರಿದಂತೆ ‘ಹಯಗ್ರೀವ’ ‘ಮುಧೋಳ್’ ‘ಕ್ಷತ್ರಿಯ’ ಮತ್ತು ಮಳೆಬಿಲ್ಲು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular