BREAKING : ನಟಿ ರಮ್ಯಾಗೆ ‘ಅಶ್ಲೀಲ ಮೆಸೇಜ್’ ಕೇಸ್ : ‘CCB’ ಯಿಂದ ಕೋರ್ಟ್’ ಗೆ 380 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ.!

ಬೆಂಗಳೂರು : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕೋರ್ಟ್ ಗೆ 380 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

11 ಆರೋಪಿಗಳ ವಿರುದ್ಧ ಕೋರ್ಟ್ ಗೆ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 45 ನೇ ಎಸಿಜೆಎಂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅಶ್ಲೀಲ ಮೆಸೇಜ್ ಮಾಡಿದ ಸ್ಕ್ರೀನ್ ಶಾಟ್ ಸೇರಿ ಸುದೀರ್ಘ ವಿವರಗಳನ್ನೊಳಗೊಂಡ ಚಾರ್ಜ್ ಶೀಟ್ ಸಿದ್ದಪಡಿಸಿದ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಕಳೆದ ಜುಲೈನಲ್ಲಿ ನಟಿ ರಮ್ಯಾ, ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನ್ಯಾಯ ಸಿಗಬೇಕು ಅಂತಾ ಕಾಮೆಂಟ್ ಮಾಡಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡಿದ ಹಲವರು ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಸಂಬಂಧ ೪೩ ಅಕೌಂಟ್ಗಳ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸಿ ಕಿಡಿಗೇಡಿಗಳಿಗೆ ತನಿಖೆಯ ಬಿಸಿ ಮುಟ್ಟಿಸಿದರು.

ಮೆಸೇಜ್ ಮಾಡಿದ 48 ಕಿಡಿಗೇಡಿಗಳ ಐಪಿ ಅಡ್ರೆಸ್ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು 15 ಮಂದಿಯನ್ನು ಗುರುತಿಸಿ ಹಲವರನ್ನು ಬಂಧಿಸಿದ್ದರು. ಕಮೆಂಟ್ ಮಾಡಿದವರಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದರು. ನಾರ್ಮಲ್ ಆಗಿ ಕಮೆಂಟ್ ಮಾಡಿದ್ದವರು, ಅರಿವಿಲ್ಲದೇ ಮೆಸೇಜ್ ಮಾಡಿದ್ದವರು ಕ್ಷಮೆ ಕೇಳಿದ್ದರು.

ನಮ್ಮನ್ನು ಎಲ್ಲಿ ಬಂಧಿಸುತ್ತಾರೋ ಎಂದು ಅಶ್ಲೀಲ ಕಮೆಂಟ್ ಮಾಡಿದ ಕೆಲವರು ತಮ್ಮ ಐಪಿ ಅಡ್ರೆಸ್ ಬ್ಲಾಕ್ ಮಾಡಿ ಊರು ಬಿಟ್ಟಿದ್ದರು. ಈ ಮೂಲಕ ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಕಿಡಿಗೇಡಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದರು. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದ ಹಾಗೆ ಅಶ್ಲೀಲ ಕಮೆಂಟ್ ಮಾಡುವ ನೆಟ್ಟಿಗರಿಗೆ ಇದೊಂದು ಪಾಠವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read