HomeEntertainment40ನೇ ವಸಂತಕ್ಕೆ ಕಾಲಿಟ್ಟ ನಟಿ ರಾಧಿಕಾ ಪಂಡಿತ್

40ನೇ ವಸಂತಕ್ಕೆ ಕಾಲಿಟ್ಟ ನಟಿ ರಾಧಿಕಾ ಪಂಡಿತ್

ಸ್ಯಾಂಡಲ್ವುಡ್ ಕ್ವೀನ್ ಎಂದೇ ಖ್ಯಾತಿ ಪಡೆದಿದ್ದ ನಟಿ ರಾಧಿಕಾ ಪಂಡಿತ್ ಇಂದು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2007ರಲ್ಲಿ ‘ನಂದಗೋಕುಲ’ ಮತ್ತು ‘ಸುಮಂಗಲಿ’ ಧಾರಾವಾಹಿಯಲ್ಲಿ ಮಿಂಚಿದ್ದ ರಾಧಿಕಾ ಪಂಡಿತ್ ಅವರಿಗೆ 2008 ರಂದು ‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿತು.

ನಟಿ ರಾಧಿಕಾ ಪಂಡಿತ್ ಅವರಿಗೆ ಬಳಿಕ ಸಾಲು ಸಾಲು ಸಿನಿಮಾ ಆಫರ್ ಗಳು ಬಂದವು. ‘ಒಲವೇ ಜೀವನ ಲೆಕ್ಕಾಚಾರ’, ‘ಲವ್ ಗುರು’, ‘ಕೃಷ್ಣನ್ ಲವ್ ಸ್ಟೋರಿ’ ಹೀಗೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದರು.

ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಅಜಯ್ ರಾಮ್ ಮತ್ತು ಧ್ರುವ ಸರ್ಜಾ ಅವರೊಂದಿಗೆ ಹೆಚ್ಚಾಗಿ ನಟಿಸಿದ್ದಾರೆ. ನಟಿ ರಾಧಿಕಾ ಪಂಡಿತ್ ಕೊನೆಯದಾಗಿ ನಟಿಸಿದ್ದ ಚಿತ್ರ ‘ಆದಿ ಲಕ್ಷ್ಮಿ ಪ್ರೇಮಪುರಾಣ’. ಮಲಯಾಳಂ ಚಿತ್ರವೊಂದರಲ್ಲಿ ಅತಿಥಿ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಚಿತ್ರರಂಗದಿಂದ ದೂರ  ಉಳಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular