ನವದೆಹಲಿ: ಯೂನಿಸೆಫ್ ಇಂಡಿಯಾ ಸೆಲೆಬ್ರಿಟಿ ಪ್ರಚಾರ ರಾಯಭಾರಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಬಹುಭಾಷ ನಟಿ ಕೀರ್ತಿ ಸುರೇಶ್ ಅವರನ್ನು ನೇಮಕ ಮಾಡಲಾಗಿದೆ.
ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ಜನಪ್ರಿಯರಾಗಿರುವ ನಟಿ ಕೀರ್ತಿ ಸುರೇಶ್ ಅವರು ಮಾನಸಿಕ ಆರೋಗ್ಯ, ಶಿಕ್ಷಣ ಮತ್ತು ಲಿಂಗ ಸಮಾನತೆಯಂತಹ ಪ್ರಮುಖ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ವಿಶ್ವಸಂಸ್ಥೆ ಚಿಲ್ದ್ರನ್ಸ್ ಫಂಡ್ ನ ಭಾರತದಲ್ಲಿನ ಶಾಖೆ ಯೂನಿಸೆಫ್ ಇಂಡಿಯಾ ಮಕ್ಕಳ ಹಕ್ಕುಗಳು, ಆರೋಗ್ಯ, ಶಿಕ್ಷಣ, ಪೋಷಣೆ, ನೀರು, ನೈರ್ಮಲ್ಯ, ತುರ್ತು ನೆರವಿನ ಬಗ್ಗೆ ನೆರವಾಗಲಿದೆ.
