HomeEntertainmentನಟಿ ಅನುಷಾ ರೈ ಲೇಟೆಸ್ಟ್ ಫೋಟೋ ಶೂಟ್

ನಟಿ ಅನುಷಾ ರೈ ಲೇಟೆಸ್ಟ್ ಫೋಟೋ ಶೂಟ್

ನಾಯಕನಟಿಯಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ಸ್ಯಾಂಡಲ್ವುಡ್ನ ಯುವ ನಟಿ ಅನುಷಾ ರೈ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

ತಮ್ಮ ಸಿನಿಮಾ ವಿಚಾರ ಸೇರಿದಂತೆ ದಿನಕ್ಕೊಂದು ಫೋಟೋ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ನಟಿ ಅನುಷಾ ರೈ ಇತ್ತೀಚಿಗಷ್ಟೇ ಫೋಟೋಶೂಟ್ ಮಾಡಿಸಿದ್ದು, ತಮ್ಮ instagram ನಲ್ಲಿ ಒಂದೊಂದಾಗಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಗಾರ್ಜಿಯಸ್, ಬ್ಯೂಟಿಫುಲ್ ಹೀಗೆ ಹಲವಾರು ಕಮೆಂಟ್ಸ್ ಗಳನ್ನು ಮಾಡಿದ್ದಾರೆ.

2017ರಲ್ಲಿ ತೆರೆಕಂಡ ‘ಮಹಾನುಭಾವರು’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಇವರು ಕಳೆದ ವರ್ಷ ‘ಪೆಂಟಾಗನ್’ ಸಿನಿಮಾದಲ್ಲಿ ಅಭಿನಯಿಸಿದ್ದು, ಇತ್ತೀಚಿಗೆ ‘ಧೈರ್ಯಂ ಸರ್ವರ್ಥ ಸಾಧನಂ’ ಸೇರಿದಂತೆ ‘ಅಬ್ಬಬ್ಬ’ ಮತ್ತು ‘bmw’ ನಲ್ಲಿ ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular