HomeEntertainmentಬೆಂಗಳೂರಿನ ಐಷಾರಾಮಿ ಏರಿಯಾದಲ್ಲಿ ನಟಿ ಅಮೂಲ್ಯ ಒಡೆತನದ ಅದ್ಧೂರಿ ಪಬ್‌ ಓಪನ್‌ ಲಕ್ಸುರಿ ಲುಕ್‌ಗೆ ನೆಟ್ಟಿಗರು...

ಬೆಂಗಳೂರಿನ ಐಷಾರಾಮಿ ಏರಿಯಾದಲ್ಲಿ ನಟಿ ಅಮೂಲ್ಯ ಒಡೆತನದ ಅದ್ಧೂರಿ ಪಬ್‌ ಓಪನ್‌ ಲಕ್ಸುರಿ ಲುಕ್‌ಗೆ ನೆಟ್ಟಿಗರು ಫಿದಾ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಕನ್ನಡಿಗರ ಮನೆಮಗಳಾಗಿದ್ದ ನಟಿ ಅಮೂಲ್ಯ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ ಮದುವೆ ಹಾಗೂ ತಾಯಿಯಾದ ಬಳಿಕ ಬೆಳ್ಳಿತೆರೆಯಿಂದ ದೂರ ಉಳಿದಿದ್ದ ಅಮೂಲ್ಯ, ಮರಳಿ ಸಿನಿಮಾಗೆ ಬರ್ತಾರೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಈಗ ಭರ್ಜರಿ ಸರ್ಪ್ರೈಸ್ ಕೊಟ್ಟಿದ್ದಾರೆ. ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಆರ್. ಚಂದ್ರ ಜಂಟಿಯಾಗಿ ಬೆಂಗಳೂರಿನ ಐಷಾರಾಮಿ ಏರಿಯಾಗಳಲ್ಲೊಂದಾದ ರಾಜರಾಜೇಶ್ವರಿ ನಗರದಲ್ಲಿ (RR Nagar) ಕಣ್ಣು ಕೋರೈಸುವಂತಹ ಪ್ರೀಮಿಯಂ ಪಬ್‌ ಒಂದನ್ನು ಉದ್ಘಾಟನೆ ಮಾಡಿ ಬಿಸಿನೆಸ್ ವುಮನ್ ಆಗಿ ಅಖಾಡಕ್ಕಿಳಿದಿದ್ದಾರೆ

ಝೀರೋ ಡಿಗ್ರಿ ಆನ್ ದಿ ಹಿಲ್’: ಭೂಮಿ ಮೇಲಿನ ಸ್ವರ್ಗ

ಆರ್.ಆರ್. ನಗರದ 5 ನೇ ಹಂತದ ಎಸ್.ಎಸ್. ಹಿಲ್ಸ್‌ನ (ಶಕ್ತಿ ಹಿಲ್ ರೆಸಾರ್ಟ್ ಹತ್ತಿರ) ಎತ್ತರದ ಬೆಟ್ಟದ ಪ್ರದೇಶದಲ್ಲಿ ಈ ಐಷಾರಾಮಿ ಪಬ್ ತಲೆಎತ್ತಿದೆ. ಇದಕ್ಕೆ ಝೀರೋ ಡಿಗ್ರಿ ಆನ್ ದಿ ಹಿಲ್ ಬ್ರೂವರಿ ಅಂಡ್ ಕಿಚನ್(Zero Degree on the Hill) ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುವಂತೆ ಬೆಟ್ಟದ ಮೇಲಿರುವ ಈ ಪಬ್‌ನಿಂದ ಇಡೀ ಬೆಂಗಳೂರು ಸಿಟಿಯ ನೈಟ್‌ಲೈಫ್ ಸುಂದರವಾಗಿ ಕಣ್ಣಿಗೆ ಕಟ್ಟುತ್ತದೆ.

ಅದ್ಭುತ ಥೀಮ್: ಸ್ಥಳೀಯ ಮತ್ತು ಪಾಶ್ಚಿಮಾತ್ಯ ಸಂಪ್ರದಾಯದ ಥೀಮ್‌ಗಳನ್ನು ಇಲ್ಲಿ ಮಿಕ್ಸ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕೃತಿಯ ಸೌಂದರ್ಯ: ಕೃತಕ ಬಂಡೆಗಳು, ನೀರಿನ ಕೊಳಗಳು, ಮತ್ತು ಮನುಷ್ಯನ ಮುಖದಾಕೃತಿಯಲ್ಲಿ ಹರಿಯುವ ನೀರಿನ ಝರಿ (Waterfalls) ಇಲ್ಲಿದೆ.

ಯೂತ್ಸ್ ಫೇವರೆಟ್ ವಿನ್ಯಾಸ: ಗುಡಿಸಲು ಮತ್ತು ಅರಮನೆ ಮಾದರಿಯ ವಿನ್ಯಾಸ, ಸಿಂಹ ಮತ್ತು ಹುಲಿ ಬಾಯಿಯ ಕೌಂಟರ್‌ಗಳು, ಗುಹೆಯಾಕಾರದ ತಾಣ ಹಾಗೂ ಹಳ್ಳಿ ಸೊಗಡಿನ ನೆಲಹಾಸು ಗ್ರಾಹಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಇನ್‌ಸ್ಟಾಗ್ರಾಮ್ ಪ್ರಿಯರು ಮತ್ತು ರೀಲ್ಸ್ ಪ್ರೇಮಿಗಳಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರತಿಯೊಂದು ಮೂಲೆಯೂ ಅದ್ಭುತ ಬ್ಯಾಕ್‌ಗ್ರೌಂಡ್ ನೀಡುತ್ತದೆ.

View this post on Instagram

A post shared by Amulya (@nimmaamulya)

ದೊಡ್ಮನೆ ಉದ್ಘಾಟನೆಗೆ ಹರಿದುಬಂದ ಸ್ಯಾಂಡಲ್‌ವುಡ್ ತಾರಾಗಣ

ಅಮೂಲ್ಯ-ಜಗದೀಶ್ ದಂಪತಿಯ ಈ ಹೊಸ ಉದ್ಯಮದ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಇಡೀ ಸ್ಯಾಂಡಲ್‌ವುಡ್‌ ದಿಗ್ಗಜರೇ ಹರಿದುಬಂದಿದ್ದರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪತ್ನಿ ಶಿಲ್ಪಾ, ನಟ ಶರಣ್, ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ಸತೀಶ್ ನೀನಾಸಂ, ಆರಾಧನಾ ರಾಮ್, ದಿಶಾ ಮದನ್, ಪ್ರಗತಿ ಶೆಟ್ಟಿ (ರಿಷಬ್ ಶೆಟ್ಟಿ ಪತ್ನಿ) ಹಾಗೂ ಹಿರಿಯ ನಟಿಯರಾದ ಶ್ರುತಿ, ಮಾಳವಿಕಾ ಅವಿನಾಶ್ ಸೇರಿದಂತೆ ಘಟಾನುಘಟಿ ಸ್ಟಾರ್ ಸೆಲೆಬ್ರಿಟಿಗಳು ಭಾಗವಹಿಸಿ ಹೊಸ ಉದ್ಯಮಕ್ಕೆ ಭರ್ಜರಿ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಸ್ವತಃ ನಟಿ ಅಮೂಲ್ಯ ಅವರೇ ವಿಡಿಯೋ ಮೂಲಕ ಪಬ್‌ನ ಮೂಲೆ ಮೂಲೆಗಳನ್ನು ಎಕ್ಸ್‌ಪ್ಲೋರ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಭಾರಿ ವೈರಲ್ ಆಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular