HomeLatest NewsActor Sudeep : 'ಕಿಚ್ಚ ಸುದೀಪ್' ಅಭಿಮಾನಿಗಳಿಗೆ ಗುಡ್ ನ್ಯೂಸ್ : ‘ಮ್ಯಾಕ್ಸ್’ ಸಕ್ಸಸ್ ಬೆನ್ನಲ್ಲೇ...

Actor Sudeep : ‘ಕಿಚ್ಚ ಸುದೀಪ್’ ಅಭಿಮಾನಿಗಳಿಗೆ ಗುಡ್ ನ್ಯೂಸ್ : ‘ಮ್ಯಾಕ್ಸ್’ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾ ಘೋಷಣೆ.!

ಬೆಂಗಳೂರು : ಇತ್ತೀಚೆಗೆ ತೆರೆಕಂಡ ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಸಿನಿರಸಿಕರಿಗೆ ಸಖತ್ ಇಷ್ಟ ಆಗಿತ್ತು. ವಿಭಿನ್ನ ಕಥೆಹಂದರವುಳ್ಳ ಮಾಸ್ ಸಿನಿಮಾ ‘ಮ್ಯಾಕ್ಸ್ ‘ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡಿತ್ತು.

ಈ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಕಿಚ್ಚ ಸುದೀಪ್ ಹೊಸ ಸಿನಿಮಾ ಘೋಷಿಸಿದ್ದಾರೆ. ಹೌದು, ಬರೀ 6 ತಿಂಗಳಲ್ಲೇ ಹೊಸ ಸಿನಿಮಾ ಮಾಡಿ ಪ್ರೇಕ್ಷಕರ ಎದುರು ತರಲಿದ್ದಾರಂತೆ. ಜುಲೈ 7 ರಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.

ಮ್ಯಾಕ್ಸ್ ಚಿತ್ರವನ್ನು ನಿರ್ದೇಶಿಸಿದ್ದ ತಮಿಳಿನ ವಿಜಯ್ ಕಾರ್ತಿಕೇಯ ಅವರು ಸುದೀಪ್ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಕೆ.47 ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ. ಸುದೀಪ್ ‘ಬಿಲ್ಲ ರಂಗ ಭಾಷ’ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದು, ಈ ಸಿನಿಮಾ ತೆರೆಗೆ ಬರಲು ಬಹಳ ಸಮಯ ಬೇಕು. ಅದರೊಳಗೆ ಕೆ.47 ಸಿನಿಮಾ ತೆರೆಗೆ ಬರಲಿದೆ. ಎಲ್ಲ ಅಂದುಕೊಂಡಂತೆ ಆದರೆ ಡಿ.25 ಕ್ಕೆ ಸಿನಿಮಾ ತೆರೆಗೆ ತರುವ ಪ್ಲ್ಯಾನ್ ಹಾಕಿಕೊಂಡಿದೆ ಚಿತ್ರತಂಡ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular