HomeKarnatakaBIG NEWS : ಕಾವೇರಿ ಹೋರಾಟದಲ್ಲಿ ಭಾಗಿಯಾದ ಶಿವಣ್ಣ : ದರ್ಶನ್, ಸುದೀಪ್, ಯಶ್ ಬರೋದು...

BIG NEWS : ಕಾವೇರಿ ಹೋರಾಟದಲ್ಲಿ ಭಾಗಿಯಾದ ಶಿವಣ್ಣ : ದರ್ಶನ್, ಸುದೀಪ್, ಯಶ್ ಬರೋದು ಡೌಟು

ಬೆಂಗಳೂರು : ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಿದ್ದು, ಫಿಲ್ಮ್ ಚೇಂಬರ್ ಎದುರು ನಡೆಯುತ್ತಿರುವ ಧರಣಿಯಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗಿದ್ದಾರೆ.

ಇದೀಗ ನಟ ಶಿವರಾಜ್ ಕುಮಾರ್ ಎಂಟ್ರಿ ಕೊಟ್ಟಿದ್ದು, ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಆದರೆ ಕರ್ನಾಟಕ ಬಂದ್  ಗೆ  ದರ್ಶನ್ ಬರೋದು ಅನುಮಾನ. ಇನ್ನು ನಟ ಸುದೀಪ್ ಕೂಡ ಸದ್ಯಕ್ಕೆ ಬೆಂಗಳೂರಲ್ಲಿಲ್ಲ, ಪ್ರತಿಭಟನಾ ಸಭೆಗೆ ಬರೋದು ಅನುಮಾನ. ಇನ್ನು ನಟ ಯಶ್ 19ನೇ ಚಿತ್ರದ ತಯಾರಿಯಲ್ಲಿದ್ದು ಬೆಂಗಳೂರಲ್ಲಿಲ್ಲ. ಹಾಗಾಗಿ ಈ ಮೂವರು ಪ್ರಮುಖ ನಟರು ಬರೋದು ಅನುಮಾನ ಎಂದು ಹೇಳಲಾಗುತ್ತಿದೆ. ವಿಜಯ್ ರಾಘವೇಂದ್ರ, ಶ್ರೀಮುರುಳಿ, ಸೃಜನ್ ಲೋಕೇಶ್, ಸೇರಿದಂತೆ ಹಲವು ನಟ ನಟಿಯರು ಭಾಗಿಯಾಗಿದ್ದು. ಸಂಜೆವರೆಗೂ ಧರಣಿಯಲ್ಲಿ ಭಾಗಿಯಾಗಲಿದ್ದಾರೆ.

ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿದೆ. ಇಡೀ ಕರ್ನಾಟಕ ಸ್ತಬ್ದವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular