ʼಜೈಲರ್ʼ​ ಖ್ಯಾತಿಯ ಮಾರಿಮುತ್ತು ನಿಧನ: ತಮಿಳು ನಟನ ಕೊನೆಕ್ಷಣದ ದೃಶ್ಯ ವೈರಲ್​

ಜೈಲರ್​ ಸಿನಿಮಾದಲ್ಲಿ ವಿಲನ್​ ಸಹಚರನ ಪಾತ್ರದಲ್ಲಿ ನಟಿಸಿದ್ದ ತಮಿಳು ನಟ ಮಾರಿಮುತ್ತು ನಿಧನದ ವಾರ್ತೆ ಇಡೀ ತಮಿಳುನಾಡಿಗೆ ಆಘಾತ ತಂದಿದೆ. ಹೃದಯಾಘಾತದಿಂದ ಅಕಾಲಿಕ ಮರಣವನ್ನಪ್ಪಿದ ಮಾರಿಮುತ್ತು ಕೊನೆಯ ಕ್ಷಣದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ.

ರಜಿನಿಕಾಂತ್​​ ಅವರ ನಟನೆಯ ಜೈಲರ್​ ಸಿನಿಮಾದಲ್ಲಿ ಮಾರಿಮುತ್ತು ಕೊನೆಯದಾಗಿ ನಟಿಸಿದ್ದಾರೆ. ನಿರ್ದೇಶಕ ಕೂಡ ಆಗಿರುವ ಮಾರಿಮುತ್ತು ಶುಕ್ರವಾರದಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ನಾಡಿಗರ ಸಂಗಮಂ (ದಕ್ಷಿಣ ಭಾರತೀಯ ಕಲಾವಿದರ ಸಂಘ) ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.

ತಮಿಳು ಧಾರವಾಹಿಯೊಂದಕ್ಕೆ ಡಬ್ಬಿಂಗ್​ ಮಾಡುತ್ತಿದ್ದ ಸಂದರ್ಭದಲ್ಲಿ ಮಾರಿಮುತ್ತು ಏಕಾಏಕಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಫೋನ್​ನಲ್ಲಿ ಮಾತನಾಡುತ್ತಾ ತಮ್ಮ ಕಾರಿನ ಕಡೆಗೆ ಮಾರಿಮುತ್ತು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಇದಾದ ಬಳಿಕ ನಟ ಮಾರಿಮುತ್ತು ಡಬ್ಬಿಂಗ್​ ಸ್ಟುಡಿಯೋದಿಂದ ಹೊರಕ್ಕೆ ಕಾರಿನಲ್ಲಿ ತೆರಳುತ್ತಾರೆ. ಈ ಸಂದರ್ಭದಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಮಾರಿಮುತ್ತು ನಿಧನಕ್ಕೆ ಇಡೀ ತಮಿಳು ಚಿತ್ರರಂಗ, ಅಭಿಮಾನಿಗಳು ಹಾಗೂ ಹಿತೈಷಿಗಳು ಕಂಬನಿ ಮಿಡಿದಿದ್ದಾರೆ.

https://twitter.com/i/status/1700171912461295746

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read