ಬೆಂಗಳೂರು : ನಟ ಕಿಚ್ಚ ಸುದೀಪ್ ಕೈಯಲ್ಲಿ ಹಲವು ಸಿನಿಮಾಗಳಿದೆ. ಜೊತೆಗೆ ಬಿಗ್ ಬಾಸ್ ಸೀಸನ್ 12 ರಲ್ಲಿ ಕೂಡ ಬ್ಯುಸಿಯಾಗಿದೆ. ಇದರ ನಡುವೆ ಕಿಚ್ಚ ಸುದೀಪ್ ಬಗ್ಗೆ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ನಟ ಕಿಚ್ಚ ಸುದೀಪ್ ಕಾರು ಅಪಘಾತಕ್ಕೀಡಾಗಿತ್ತು .! ಈ ವಿಷಯ ಹಲವರಿಗೆ ಗೊತ್ತೇ ಇರಲಿಲ್ಲ. 2003 ರಲ್ಲಿ ಎಂಜಿ ರಸ್ತೆಯಲ್ಲಿ ನಡೆದ ಅಪಘಾತದ ಬಗ್ಗೆ ಪ್ರಶಾಂತ್ ಸಂಬರಗಿ ಇತ್ತೀಚೆಗೆ ಹೇಳಿದ್ದಾರೆ. 2003 ರಲ್ಲಿ ನಾನು ಮತ್ತೆ ಸುದೀಪ್ ಸರ್ ಇದ್ದ ಕಾರು ಅಪಘಾತಕ್ಕೀಡಾಗಿತ್ತು ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಮನೆಯವರಿಗೆ ವಿಚಾರ ತಿಳಿದರೆ ಗಾಬರಿ ಆಗುತ್ತಾರೆ, ಯಾವುದೇ ಕಾರಣಕ್ಕೂ ಸುದೀಪ್ ವಿಷಯ ಬಹಿರಂಗಪಡಿಸಬಾರದು ಎಂದು ಹೇಳಿದ್ದರು ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಶಾಂತ್ ಸಂಬರಗಿ ಈ ವಿಚಾರ ಬಿಚ್ಚಿಟ್ಟಿದ್ದಾರೆ.ಅಂದು ನಾವು ಕೂತಿದ್ದ ಕಾರಿಗೆ ಹೊಸ ಕಾರ್ ಒಂದು ಬಂದು ಡಿಕ್ಕಿ ಹೊಡೆದಿತ್ತು. ರಾತ್ರಿ 12:30 ಕ್ಕೆ ಅಪಘಾತ ಸಂಭವಿಸಿತ್ತು. ಆ ಸಮಯದಲ್ಲಿ ಯಾರೂ ಕೂಡ ನೋಡಿರಲಿಲ್ಲ. ಆದರೆ ಈ ಬಗ್ಗೆ ಪೇಪರ್ ನಲ್ಲಿ ನ್ಯೂಸ್ ಬಂದಿತ್ತು ಸಂಬರಗಿ ಹೇಳಿದ್ದಾರೆ.