ಬೆಂಗಳೂರು : ಇದ್ರೆ ನೆಮ್ದಿಯಾಗಿ ಇರ್ಬೇಕ್ ಎಂದಿದ್ದ ನಟ ದರ್ಶನ್ ಗೆ ನಿರಾಸೆಯಾಗಿದ್ದು, ದಿಂಬು, ಹಾಸಿಗೆ ನೀಡಲು ಕೋರ್ಟ್ ನಿರಾಕರಿಸಿದೆ.
ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ನಿರಾಸೆಯಾಗಿದೆ. ದರ್ಶನ್ ಗೆ ದಿಂಬು, ಹಾಸಿಗೆ ನೀಡಲು ಕೋರ್ಟ್ ನಿರಾಕರಿಸಿದ್ದು, ದರ್ಶನ್ ಪರ ವಕೀಲರ ಅರ್ಜಿ ರದ್ದುಗೊಂಡಿದೆ. ಬದಲಾಗಿ ಕೋರ್ಟ್ ನಟ ದರ್ಶನ್ ಗೆ ತಿಂಗಳಿಗೊಮ್ಮೆ ಬಟ್ಟೆ ಹೊದಿಕೆ ನೀಡಲು ಸೂಚನೆ ನೀಡಿದೆ.
ಅದೇ ರೀತಿ ದರ್ಶನ್ ರನ್ನು ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡುವುದು ಜೈಲಾಧಿಕಾರಿಗಳ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಸಿಟಿ ಸಿವಿಲ್ ಕೋರ್ಟ್ ಹೇಳಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.31 ಕ್ಕೆ ದೋಷಾರೋಪ ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಕಾನ್ಪರೆನ್ಸ್ ಮೂಲಕ ನಟ ದರ್ಶನ್ ಸೇರಿದಂತೆ 6 ಮಂದಿ ಆರೋಪಿಗಳು ಕೋರ್ಟ್ ನಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದಿಂದ ಕೈ ಬಿಡುವಂತೆ 5 ನೇ ಆರೋಪಿ ನಂದೀಶ್ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ.
