ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸದ್ಯ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ.
ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ ನಟ ದರ್ಶನ್ ಗೆ ಯಾವುದೇ ರಾಜಾತಿಥ್ಯ ಇಲ್ಲ. ಸಹ ಕೈದಿಗಳಿಗೆ ನೀಡುವ ಊಟ, ತಿಂಡಿಯನ್ನೇ ದರ್ಶನ್ ಗೆ ನೀಡಲಾಗುತ್ತಿದೆ.
ಜೈಲಿನಲ್ಲಿ ದಿನ ಕಳೆಯಲು ದರ್ಶನ್ ಪುಸ್ತಕಗಳ ಮೊರೆ ಹೋಗಿದ್ದಾರೆ. ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿದ ನಟ ದರ್ಶನ್ ಜೈಲಿನ ಗ್ರಂಥಾಲಯದಿಂದ ಪುಸ್ತಕಗಳನ್ನು ತರಿಸಿಕೊಂಡಿದ್ದಾರೆ. ಪುಸ್ತಕಗಳನ್ನು ಓದುವ ಮೂಲಕ ದರ್ಶನ್ ಜೈಲಿನಲ್ಲಿ ಸಮಯ ಕಳೆಯಲು ಮುಂದಾಗಿದ್ದಾರೆ. ಜೈಲಿನಲ್ಲಿ ಬಂಧಿಯಾಗಿರುವ ನಟ ದರ್ಶನ್ ಮೇಲೆ ನಿಗಾ ಇಡಲಾಗಿದ್ದು, ಯಾವುದೇ ಪೊಲೀಸ್ ಸಿಬ್ಬಂದಿಗಳು ದರ್ಶನ್ ಜೊತೆ ಮಾತನಾಡದಂತೆ ಸೂಚಿಸಲಾಗಿದೆ. ಈ ಬಗ್ಗೆ ನಿಗಾ ಇಡಲು ಪ್ರಮುಖ ಕಡೆ ಕ್ಯಾಮೆರಾ ಫಿಕ್ಸ್ ಮಾಡಿದ್ದಾರೆ.