HomeEntertainmentಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರಿಂದ 'ಮೆಹಬೂಬಾ' ಚಿತ್ರದ ವಿಡಿಯೋ ಹಾಡು ನಾಳೆ ರಿಲೀಸ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರಿಂದ ‘ಮೆಹಬೂಬಾ’ ಚಿತ್ರದ ವಿಡಿಯೋ ಹಾಡು ನಾಳೆ ರಿಲೀಸ್

ಬಿಗ್ ಬಾಸ್ ಖ್ಯಾತಿಯ ಶಶಿ ಅಭಿನಯದ ‌ʼಮೆಹಬೂಬʼ ಚಿತ್ರದ ಟೀಸರ್ ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿ ಸಕ್ಕತ್ ಸೌಂಡ್ ಮಾಡಿದ್ದು, ಇನ್ನಷ್ಟು ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ. ನಾಳೆ ಈ ಸಿನಿಮಾದ ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಗಮಿಸಲಿದ್ದು, ಈ ಹಾಡನ್ನು ಲಾಂಚ್ ಮಾಡಲಿದ್ದಾರೆ.

ಅನುಪ್ ಆಂಟೋನಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಶಶಿ ಅವರಿಗೆ ಜೋಡಿಯಾಗಿ ಪಾವನ ಗೌಡ ಅಭಿನಯಿಸಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಕಿರಣ್ ಅಂಪಾಪುರ ಛಾಯಾಗ್ರಹಣವಿದೆ. ಶಶಿ ಅವರೇ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದು, ಉಮಾ ಮಹದೇವಯ್ಯ ಸಹ ನಿರ್ಮಾಪಕರಾಗಿದ್ದಾರೆ. ಇದೊಂದು ಕೇರಳದಲ್ಲಿ ನಡೆದ ನೈಜ ಘಟನಾಧಾರಿತ ಸಿನಿಮಾ ಎಂದು  ಹೇಳಲಾಗಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular