HomeLatest Newsಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಆಸಿಡ್ ದಾಳಿ: ಫೋಟೋಗ್ರಾಫರ್ ಅರೆಸ್ಟ್

ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಆಸಿಡ್ ದಾಳಿ: ಫೋಟೋಗ್ರಾಫರ್ ಅರೆಸ್ಟ್

ಜೈಪುರ: ಫೋಟೋಗ್ರಾಫರ್ ಓರ್ವ ಶಾಅಲಾ ಬಾಲಕಿ ಮೇಲೆ ಆಸಿಡ್ ದಾಳಿ ನಡೆಸಿರುವ ಘೋರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಮದುವೆ ಕಾರ್ಯಕ್ರಮಕ್ಕೆ ಫೋಟೋಗ್ರಾಫರ್ ಆಗಿ ಹೋಗಿದ್ದ 19 ವರ್ಷದ ಓಂಪ್ರಕಾಶ್ ಅಲಿಯಾಸ್ ಜಾನಿ ಎಂಬಾತ ಮದುವೆ ಮನೆಯಲ್ಲಿ ಬಾಲಕಿಯನ್ನು ನೋಡಿದ್ದಾನೆ. ಬಳಿಕ ಆಕೆಯನ್ನು ಮಾತನಾಡಿಸಲು ಯತ್ನಿಸಿದ್ದಾನೆ. ಬಾಲಕಿ ತಾನು ಅಪರಿಚಿತರೊಂದಿಗೆ ಮಾತನಾಡಲ್ಲ ಎಂದಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಯುವಕ ಆಕೆ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ.

ಬಾಲಕಿ ತನ್ನ ಬಳಿ ಮಾತನಾಡಿಲ್ಲ ಎಂಬುದನ್ನೇ ದೊಡ್ಡ ಅವಮಾನ ಎಂಬಂತೆ ಪರಿಗಣಿಸಿದ ಯುವಕ. ಆಕೆ ಗಂಗಾನಗರ ಜಿಲ್ಲೆಯ ಸುಭಾಷ್ ಪಾರ್ಕ್ ಬಳಿಯ ರಸ್ತೆಯಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಓಮ್ ಪ್ರಕಾಶ್ ಏಕಾಏಕಿ ಬಾಲಕಿ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಬಾಲಕಿಯ ಬಟ್ಟೆ ಸುಟ್ಟು ಹೋಗಿದೆ. ಬಲಕಿಯ ಕೈಗಳಿಗೂ ಸುಟ್ಟ ಗಾಯಗಳಾಗಿವೆ. ಬಾಟಲಿನಲ್ಲಿದ್ದ ಆಸಿಡ್ ಬಾಲಕಿಯ ಮೇಲೆ ಎಗರಿಸಿ ಆರೋಪಿ ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನ್ನ ಗುರುತು ಸಿಗಬಾರದು ಎಂಬ ಕಾರಣಕ್ಕೆ ಆರೋಪಿ ತನ್ನ ಬೈಕ್ ನಂಬರ್ ಪ್ಲೇಟ್ ಗೆ ಬಟ್ಟೆಯಿಂದ ಮರೆಮಾಚಿದ್ದ. ಮುಖಕ್ಕೆ ಬಟ್ಟೆ ಜೊತೆ ಹೆಲ್ಮೆಟ್ ನಿಂದಲೂ ಮುಚ್ಚಿಕೊಂಡಿದ್ದ. ಆಸಿಡ್ ದಾಳಿಯ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಂತ್ರಸ್ತ ಬಾಲಕಿ ಹಾಗೂ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಆರೋಪಿ ಬೈಕ್ ನಂಬರ್ ಪ್ಲೇಟ್ ಹಾಗೂ ಮುಖವನ್ನು ಮರೆ ಮಾಚಿದ್ದರಿಂದ ಆರೋಪಿ ಪತ್ತೆ ಪೊಲೀಸರಿಗೂ ಸವಾಲಾಗಿತ್ತು. ಆರೋಪಿಯ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ಬಹುಮಾನ ಘೋಷಿಸಿಸಿದ್ದರು. ಘಟನೆ ನಡೆದು ಮೂರು ದಿನಗಳ ಬಳಿಕ ಆರೋಪಿಯ ಸುಳಿವು ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಓಂಪ್ರಕಾಶ್ ನನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular