HomeKarnatakaಪತ್ನಿ ಹಾಗೂ ಸ್ನೇಹಿತನ ವಿರುದ್ಧ ಆರೋಪ ಮಾಡಿ, ಆಡಿಯೋ ರೆಕಾರ್ಡ್ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿ ಹಾಗೂ ಸ್ನೇಹಿತನ ವಿರುದ್ಧ ಆರೋಪ ಮಾಡಿ, ಆಡಿಯೋ ರೆಕಾರ್ಡ್ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ಪತಿ

ತುಮಕೂರು: ಪತ್ನಿ ಹಾಗೂ ಸ್ನೇಹಿತನ ವಿರುದ್ಧ ಅನೈತಿಕ ಸಂಬಂಧ ಆರೋಪ ಮಾಡಿ ಪತಿಯೊಬ್ಬ ಆಡಿಯೋ ರೆಕಾರ್ಡ್ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಬುಕ್ಕಾ ಪಟ್ಟಣದಲ್ಲಿ ನಡೆದಿದೆ.

ಗುವ್ವಲಕಾನಹಳ್ಳಿ ಸುರೇಶ್ ಹಾಗೂ ಹೇಮಾ 15 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಸುರೇಶ್ ಸ್ನೇಹಿತ ಹುನೇಗಲ್ ಗ್ರಾಮದ ನಿವಾಸಿ ಗಂಗಾಧರ್ ಎಂಬಾತ ಆಗಾಗ ಮನೆಗೆ ಬುಂದು ಹೋಗುತ್ತಿದ್ದ. ಬರ ಬರುತ್ತ ಸುರೇಶ್ ಗೆ ಗಂಗಾಧರ್ ಹಾಗೂ ಪತ್ನಿ ಹೇಮಾ ಬಗ್ಗೆ ಅನುಮಾನ ಶುರುವಾಗಿದೆ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಗಲಾಟೆಯೂ ನಡೆದಿದೆ. ಪೊಲೀಸರವರೆಗೂ ದೂರು ಹೋಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಗಳ ಬಳಿಕ ಪತ್ನಿ ಹೇಮ ಅಹಾಗೂ ಸ್ನೇಹಿತ ಗಂಗಾಧರ ಸೇರಿ ಪತಿ ಸುರೇಶ್ ಗೆ ಮನಸಿಕ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ನೊಂದ ಸುರೇಶ ತನ್ನ ಸಾವಿಗೆ ಪತ್ನಿ ಹೇಮ ಹಾಗೂ ಸ್ನೇಹಿತ ಗಂಗಾಧರ ಕಾರಣ ಎಂದು ಆಡಿಯೋ ರೆಕಾರ್ಡ್ ಮಾಡಿಟ್ಟು ಸಾವಿಗೆ ಶರಣಾಗಿದ್ದಾನೆ. ಇದೀಗ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular