ಮಕ್ಕಳೇ ರಸ್ತೆ ದಾಟುವಾಗ ಇರಲಿ ಎಚ್ಚರ…! ಕೂದಲೆಳೆ ಅಂತರದಲ್ಲಿ ಪಾರಾದ ವಿದ್ಯಾರ್ಥಿನಿ…..ಎದೆ ಝಲ್ ಎನಿಸುವ ದೃಶ್ಯದ ವಿಡಿಯೋ ವೈರಲ್

ಬೆಂಗಳೂರು: ರಸ್ತೆ ದಾಟುವಾಗ ಎಷ್ಟು ಎಚ್ಚರವಾಗಿದ್ದರೂ ಕಡಿಮೆಯೇ. ಹಲವು ಬಾರಿ ದೊಡ್ಡವರೇ ಎಚ್ಚರ ತಪ್ಪಿ ಅಪಘಾತಗಳು ಸಂಭವಿಸುತ್ತವೆ. ಇನ್ನು ಮಕ್ಕಳಿಗಂತು ರಸ್ತೆ ದಾಟುವಾಗ ಎಚ್ಚರದಿಂದ ಇರಲು ಎಷ್ಟು ಹೇಳಿಕೊಟ್ಟರೂ ಕಡಿಮೆಯೆ. ಇಲ್ಲೋರ್ವ ವಿದ್ಯಾರ್ಥಿನಿ ರಸ್ತೆ ದಾಟುವಾಗ ಸಂಭವಿಸಲಿದ್ದ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಎದೆ ಝಲ್ ಎನಿಸುವಂತಿದೆ. ರಸ್ತೆ ದಾಟುವ ವೇಳೆ ವಿದ್ಯಾರ್ಥಿನಿಯೊಬ್ಬಳು ಅತ್ತಿಂದಿತ್ತ ಇತ್ತಿದ್ದತ್ತ ಓಡಿದ್ದಾಳೆ ಇದೇ ವೇಳೆ ಸ್ಕೂಲ್ ಬಸ್ ವೊಂದು ಬಂದಿದ್ದು, ಕ್ಷಣಾರ್ಧದಲ್ಲಿ ಅಪಘಾತದಿಂದ ಪಾರಾಗಿದ್ದಾಳೆ.

ರಸ್ತೆ ಎದುರು ಇದ್ದ ವಿದ್ಯಾರ್ಥಿನಿ ಏಕಾಏಕಿ ರಸ್ತೆ ದಾಟಿ ಬಂದವಳು ನಿಂತಿದ್ದ ಬಸ್ ನ ಹಿಂದಿನಿಂದ ಮತ್ತೆ ರಸ್ತೆ ದಾಟಲು ಓಡಿದ್ದಾಳೆ. ಇದೇ ವೇಳೆ ಸ್ಕೂಲ್ ಬಸ್ ವೊಂದು ವೇಗವಾಗಿ ಬಂದಿದೆ. ಅರ್ಧ ರಸ್ತೆ ದಾಟಿದವಳು ಅಲ್ಲೇ ನಿಂತ ವಿದ್ಯಾರ್ಥಿನಿ ಸಂಭವಿಸಲಿದ್ದ ಅಪಘಾತದಿಂದ ಜಸ್ಟ್ ಮಿಸ್ ಆಗಿದ್ದಾಳೆ. ತಕ್ಷಣ ರಸ್ತೆ ದಾಟಿ ಮತ್ತೆ ಓಡಿದ್ದಾಳೆ. ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಮೈ ನಡುಗುವಂತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read