ಹೊಸಕೋಟೆ: ರಸ್ತೆಬಳಿಯ ಗಿಡಗಳಿಗೆ ನೀರು ಹಾಕಲು ನಿಲ್ಲಿಸಲಾಗಿದ್ದ ನೀರಿನ ಟ್ಯಾಂಕರ್ ಹಾಗೂ ಆಯಿಲ್ ಟ್ಯಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಚಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಹೊಸಕೋಟೆ ತಾಲೂಕಿನ ಸಾದಪನಹಳ್ಳಿ ಗೇಟ್ ಬಳಿ ಈ ದುರಂತ ಸಂಭವಿಸಿದೆ. ಗಿಡಗಳಿಗೆ ನೀರು ಹಾಕಿಲು ನಿಲ್ಲಿಸಲಾಗಿದ್ದ ವಾಹನಕ್ಕೆ ಹಿಂದಿನಿಂದ ಬಂದ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಆಯಿಲ್ ಟ್ಯಾಂಕರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಪಘಾತದಿಂದಾಗಿ ಆಯಿಲ್ ಟ್ಯಾಂಕರ್ ನಲ್ಲಿದ್ದ ಆಯಿಲ್ ಸೋರಿಕೆಯಾಗಿ ರಸ್ತೆಗೆ ಹರಿದಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

