HomeLatest NewsBIG NEWS: ಭೀಕರ ಅಪಘಾತ: ಫ್ಲೈ ಓವರ್ ಮೇಲಿದ್ದ ಬಿದ್ದು ಮಹಿಳೆ ಸಾವು

BIG NEWS: ಭೀಕರ ಅಪಘಾತ: ಫ್ಲೈ ಓವರ್ ಮೇಲಿದ್ದ ಬಿದ್ದು ಮಹಿಳೆ ಸಾವು

ದೇವನಹಳ್ಳಿ: ಬೈಕ್ ಗೆ ಕಾರು ಡಿಕ್ಕಿಯಾದ ಪರಿಣಾಮ ಫ್ಲೈಓವರ್ ಮೇಲಿಂದ ಬಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಲಿಯಲ್ಲಿ ನಡೆದಿದೆ.

ಬಚ್ಚಳ್ಳಿ ಗೇಟ್ ಫ್ಲೈ ಓವರ್ ನಲ್ಲಿ ಈ ದುರಂತ ಸಂಭವಿಸಿದೆ. ಬಾಣಸವಾಡಿ ಮೂಲದ ನೇತ್ರಾವತಿ (31) ಮೃತ ಮಹಿಳೆ. ಒನ್ ವೇ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಚ್ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ನಲ್ಲಿದ್ದ ಮಹಿಳೆ ಮೇಲ್ಸೇತುವೆ ಮೇಲಿಂದ ಕೆಳಗೆ ಹಾರಿ ಬಿದ್ದಿದ್ದಾಳೆ. ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.

ಖಾಸಗಿ ಟೀ ಶಾಪ್ ನಲ್ಲಿ ಮಹಿಳೆ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ. ದೇವನಹಳ್ಳಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular