HomeKarnatakaBIG NEWS : ಸಿಡಿಮದ್ದು ತಾಲೀಮು ವೇಳೆ ಅವಘಡ : ಸಿಬ್ಬಂದಿ ಆಸ್ಪತ್ರೆಗೆ ದಾಖಲು

BIG NEWS : ಸಿಡಿಮದ್ದು ತಾಲೀಮು ವೇಳೆ ಅವಘಡ : ಸಿಬ್ಬಂದಿ ಆಸ್ಪತ್ರೆಗೆ ದಾಖಲು

ಮೈಸೂರು : ಮೈಸೂರು ದಸರಾ ಬಹಳ ವಿಜೃಂಭಣೆಯಾಗಿ ನಡೆಯುತ್ತಿದ್ದು, ಸಿಡಿಮದ್ದು ತಾಲೀಮು ವೇಳೆ ಅವಘಡವೊಂದು ನಡೆದಿದೆ.

ಸಿಡಿಮದ್ದು ಸಿಡಿದು ಸಿಬ್ಬಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಭಾನುವಾರ ನಿನ್ನೆ ರಿಹರ್ಸಲ್ ವೇಳೆ ಅವಘಡ ನಡೆದಿದೆ. ಜಂಬೂಸವಾರಿಗೆ ಪುಷ್ಪಾರ್ಚನೆ ರಿಹರ್ಸಲ್ ನಡೆಸುವ ವೇಳೆ ಅವಘಡ ನಡೆದಿದೆ. ಕುಶಾಲತೋಪು ಸಿಡಿದು ಸಿಬ್ಬಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನೂ, ಮೈಸೂರು ದಸರಾ ಜೊತೆಗೆ ಬೆಂಗಳೂರು ದಸರಾ ಹಬ್ಬಕ್ಕೂ ಭದ್ರತೆ ಹೆಚ್ಚಿದೆ. ಮಂಗಳವಾರ ನಡೆಯುವ ಅದ್ಧೂರಿ ದಸರಾ ರಥಗಳ ಮೆರವಣಿಗೆಗೆ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಆರ್.ಟಿ.ನಗರದ ಮಠದಹಳ್ಳಿ ಮೈದಾನಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗೆ ಬರೋಬ್ಬರಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular