ಕಲಬುರಗಿ: ಕಲಬುರಗಿ ಜಿಲ್ಲೆ ಮಳಖೇಡದ ಐತಿಹಾಸಿಕ ರಾಷ್ಟ್ರಕೂಟರ ಕೋಟೆಯಲ್ಲಿ ಶನಿವಾರ ವಿದ್ಯುತ್ ತಂತಿ ತುಳಿದು ಮೂರು ವರ್ಷದ ಮಗು ಮೃತಪಟ್ಟಿದೆ.
ಬಿರುಗಾಳಿಯಿಂದಾಗಿ ತುಂಡಾಗಿ ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಗು ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಯೇಷಾ ಸಿದ್ದಿಕಾ(3) ಮೃತಪಟ್ಟ ಮಗು. ಮಗುವನ್ನು ರಕ್ಷಿಸಲು ಹೋದ ಮಗುವಿನ ದೊಡ್ಡಮ್ಮ ಮೆಹರುನ್ನೀಸಾ ಬೇಗಂ ತೀವ್ರವಾಗಿ ಗಾಯಗೊಂಡಿದ್ದಾರೆ. ಮೂಲತಃ ಸೇಡಂ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಾಲಕಿ ಪೋಷಕರು ಅನೇಕ ವರ್ಷಗಳಿಂದ ಮಳಖೇಡದಲ್ಲಿ ವಾಸವಾಗಿದ್ದಾರೆ.