ಬೇಸಿಗೆಯ ಬಿಸಿಲಿನಿಂದ ತಂಪಾಗಲು ಎಸಿ ಆಶ್ರಯಿಸುವುದು ಸಾಮಾನ್ಯ. ಆದರೆ, ರಾತ್ರಿ ಪೂರ್ತಿ ಎಸಿ ಓಡಿಸಿದರೆ ವಿದ್ಯುತ್ ಬಿಲ್ ಎಷ್ಟಾಗಬಹುದು ಎಂಬ ಚಿಂತೆ ಕಾಡುವುದು ಸಹಜ. ಒಂದು ಟನ್ ಎಸಿ ರಾತ್ರಿ ಪೂರ್ತಿ ಕಾರ್ಯನಿರ್ವಹಿಸಿದರೆ ಎಷ್ಟು ವಿದ್ಯುತ್ ಬಳಸುತ್ತದೆ ಮತ್ತು ನಿಮ್ಮ ಬಿಲ್ ಮೇಲೆ ಅದರ ಪರಿಣಾಮವೇನು ಎಂದು ತಿಳಿಯಲು ಇಲ್ಲಿದೆ ಸುಲಭ ವಿಧಾನ.
ನಿಮ್ಮ ಎಸಿಯ ಟನ್ ಸಾಮರ್ಥ್ಯ (ಉದಾಹರಣೆಗೆ 1 ಟನ್ ಎಸಿ ಸುಮಾರು 1.2 ಕಿಲೋವ್ಯಾಟ್ ವಿದ್ಯುತ್ ಬಳಸುತ್ತದೆ), ದಿನಕ್ಕೆ ಎಷ್ಟು ಗಂಟೆಗಳ ಕಾಲ ಬಳಸುತ್ತೀರಿ (ಉದಾಹರಣೆಗೆ 8 ಗಂಟೆ), ಪ್ರತಿ ಯೂನಿಟ್‌ಗೆ ವಿದ್ಯುತ್ ದರ (₹6 ರಿಂದ ₹8) ಮತ್ತು ತಿಂಗಳಿಗೆ ಎಷ್ಟು ದಿನ ಬಳಸುತ್ತೀರಿ (ಉದಾಹರಣೆಗೆ 30 ದಿನಗಳು) ಎಂಬ ಮಾಹಿತಿಯನ್ನು ಹೊಂದಿದ್ದರೆ ನೀವೇ ಬಿಲ್ ಲೆಕ್ಕ ಹಾಕಬಹುದು.
ಇದಕ್ಕಾಗಿ ಈ ಸರಳ ಸೂತ್ರ ಬಳಸಿ: ಬಿಲ್ (₹)=ವಿದ್ಯುತ್ (kW)×ಗಂಟೆಗಳು/ದಿನ×ದಿನಗಳು/ತಿಂಗಳು×ಪ್ರತಿ ಯೂನಿಟ್‌ಗೆ ದರ (₹).
ಉದಾಹರಣೆಗೆ, ನಿಮ್ಮದು 1 ಟನ್ ಎಸಿ ಆಗಿದ್ದು, ಅದು ಗಂಟೆಗೆ 1.2 ಕಿಲೋವ್ಯಾಟ್ ವಿದ್ಯುತ್ ಬಳಸುತ್ತದೆ ಎಂದುಕೊಳ್ಳಿ. ದಿನಕ್ಕೆ 8 ಗಂಟೆಗಳ ಕಾಲ ಓಡಿಸಿದರೆ, ತಿಂಗಳ ಬಳಕೆಯ ಲೆಕ್ಕಾಚಾರ ಹೀಗಿರುತ್ತದೆ: 1.2×8×30=288 ಕಿಲೋವ್ಯಾಟ್ ಗಂಟೆಗಳು. ನಿಮ್ಮ ನಗರದಲ್ಲಿ ಪ್ರತಿ ಯೂನಿಟ್‌ಗೆ ದರ ₹ 8 ಆಗಿದ್ದರೆ, ಮಾಸಿಕ ಬಿಲ್ 288×8=₹2,304 ಆಗಬಹುದು. ಅಂದರೆ, ಕೇವಲ ರಾತ್ರಿ ಎಸಿ ಬಳಸುವುದರಿಂದ ನಿಮ್ಮ ಬಿಲ್ ₹ 2,304 ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ.
ವಿದ್ಯುತ್ ಬಿಲ್ ಉಳಿಸಲು ಕೆಲವು ಸ್ಮಾರ್ಟ್ ಟಿಪ್ಸ್: ಎಸಿಯನ್ನು 24-25°C ನಲ್ಲಿಡಿ, ಫ್ಯಾನ್ ಜೊತೆ ಬಳಸಿ, ರಾತ್ರಿ ಸ್ಲೀಪ್ ಮೋಡ್ ಬಳಸಿ, ನಿಯಮಿತವಾಗಿ ಸರ್ವಿಸ್ ಮಾಡಿಸಿ ಮತ್ತು ಕೋಣೆಗಳಲ್ಲಿ ಗಾಳಿಯಾಡದಂತೆ ವ್ಯವಸ್ಥೆ ಮಾಡಿ.