HomeEntertainmentಸ್ಟಾರ್ ನಟನ ಮಗನಾಗಿದ್ದರೂ 4500 ರೂಪಾಯಿ ಸಂಬಳಕ್ಕೆ ಕೆಲಸ ಮಾಡ್ತಿದ್ದಾನೆ ಆರವ್: ಮಗನ ಸರಳತೆ ಬಗ್ಗೆ...

ಸ್ಟಾರ್ ನಟನ ಮಗನಾಗಿದ್ದರೂ 4500 ರೂಪಾಯಿ ಸಂಬಳಕ್ಕೆ ಕೆಲಸ ಮಾಡ್ತಿದ್ದಾನೆ ಆರವ್: ಮಗನ ಸರಳತೆ ಬಗ್ಗೆ ಅಕ್ಷಯ್ ಕುಮಾರ್ ಹೆಮ್ಮೆ!

ಬಾಲಿವುಡ್‌ನ ‘ಖಿಲಾಡಿ’ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ದಂಪತಿಯ ಪುತ್ರ ಆರವ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಲ್ಲಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ಬೆಳ್ಳಿಪರದೆಯ ಮೇಲೆ ಮಿಂಚಲು ಹಾತೊರೆಯುತ್ತಾರೆ. ಆದರೆ ಅಕ್ಷಯ್ ಪುತ್ರ ಆರವ್ ಮಾತ್ರ ಚಿತ್ರರಂಗದಿಂದ ದೂರವುಳಿದು, ಅತ್ಯಂತ ಸರಳ ಜೀವನ ನಡೆಸುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ ತಮ್ಮ ಮಗನ ವೃತ್ತಿಜೀವನ ಮತ್ತು ಸರಳತೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

ಫ್ಯಾಷನ್ ಲೋಕದತ್ತ ಆರವ್ ಒಲವು

ಅಕ್ಷಯ್ ಕುಮಾರ್ ಅವರ ಇತ್ತೀಚಿನ ಚಿತ್ರ ‘ಭೂತ್ ಬಾಂಗ್ಲಾ’ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಸಿನಿಮಾದ ಪ್ರಚಾರದ ವೇಳೆ ಅವರು ಮಗನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ನನ್ನ ಮಗನಿಗೆ ಸಿನಿಮಾದಲ್ಲಿ ನಟಿಸುವ ಯಾವುದೇ ಆಸಕ್ತಿಯಿಲ್ಲ. ಆತ ಫ್ಯಾಷನ್ ರಂಗದಲ್ಲಿ ತನ್ನ ಭವಿಷ್ಯವನ್ನು ಕಂಡುಕೊಳ್ಳಲು ಬಯಸಿದ್ದಾನೆ. ಶಿಸ್ತು ಮತ್ತು ಫಿಟ್ನೆಸ್ ವಿಷಯದಲ್ಲಿ ಆತ ನನ್ನಂತೆಯೇ ಇದ್ದಾನೆ. ತನ್ನದೇ ಆದ ಸ್ವಂತ ದಾರಿಯನ್ನು ಆತ ಕಂಡುಕೊಳ್ಳುತ್ತಿದ್ದಾನೆ” ಎಂದು ಅಕ್ಷಯ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

4500 ರೂಪಾಯಿ ಸಂಬಳದ ನೌಕರಿ!

ಆರವ್ ಸದ್ಯ ಲಂಡನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರೂ, ಫ್ಯಾಷನ್ ಕ್ಷೇತ್ರದ ಆಳವಾದ ಅರಿವು ಪಡೆಯಲು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅಕ್ಷಯ್, “ಆತ ಇಂದಿಗೂ 4500 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾನೆ. ಇದು ಒಳ್ಳೆಯ ವಿಷಯವೇ ಅಲ್ಲವೇ? ಹಳ್ಳಿಗಳಿಗೆ ಹೋಗಿ ಅಲ್ಲಿನ ವಿಭಿನ್ನ ಪ್ರಿಂಟ್‌ಗಳು ಮತ್ತು ವಿನ್ಯಾಸಗಳ ಬಗ್ಗೆ ಕಲಿಯುತ್ತಿದ್ದಾನೆ. ನಾನು ಅವನಿಗೆ ಅತಿಯಾಗಿ ಬುದ್ಧಿವಾದ ಹೇಳುವುದಿಲ್ಲ, ಆದರೆ ಯಾರಿಗೂ ತೊಂದರೆ ಮಾಡದಂತೆ ಬದುಕಲು ಹೇಳಿದ್ದೇನೆ” ಎಂದು ತಿಳಿಸಿದ್ದಾರೆ.

ಆರವ್ ಈಗಾಗಲೇ ತನ್ನ ವಿಭಿನ್ನ ಫ್ಯಾಷನ್ ಸೆನ್ಸ್ ಮೂಲಕ ಸುದ್ದಿಯಾಗಿದ್ದು, ಅವರ ಸೋದರಸಂಬಂಧಿ ನವೋಮಿಕಾ ಸರಣ್ ಶೀಘ್ರದಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಆದರೆ ಅಕ್ಷಯ್ ಪುತ್ರ ಮಾತ್ರ ಗ್ಲಾಮರ್ ಪ್ರಪಂಚದಿಂದ ದೂರವಿದ್ದು, ತಳಮಟ್ಟದಿಂದ ಕೆಲಸ ಕಲಿಯುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಾಂಗ್ಲಾ’ ಚಿತ್ರದಲ್ಲಿ ಟಬು, ಪರೇಶ್ ರಾವಲ್ ಮತ್ತು ರಾಜ್‌ಪಾಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular