ನವದೆಹಲಿ/ಬೆಂಗಳೂರು: ಆಮ್ ಆದ್ಮಿ ಪಾರ್ಟಿಗೆ (AAP) ರಾಷ್ಟ್ರಮಟ್ಟದಲ್ಲಿ ಭಾರಿ ಆಘಾತ ಎದುರಾಗಿದೆ. ಪಕ್ಷದ ಪ್ರಮುಖ ನಾಯಕರಾಗಿದ್ದ ರಾಘವ್ ಚಡ್ಡಾ ಸೇರಿದಂತೆ ಏಳು ಮಂದಿ ರಾಜ್ಯಸಭಾ ಸಂಸದರು ಎಎಪಿ ತೊರೆದು ಭಾರತೀಯ ಜನತಾ ಪಾರ್ಟಿ (BJP) ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಭಾವಿ ನಾಯಕ ರಾಘವ್ ಚಡ್ಡಾ ಸೇರಿದಂತೆ ಏಳು ಮಂದಿ ರಾಜ್ಯಸಭಾ ಸಂಸದರು ಬಿಜೆಪಿ ಸೇರ್ಪಡೆಯಾಗಿರುವುದು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ ಎಎಪಿ, “ಕೇಂದ್ರದ ತನಿಖಾ ಸಂಸ್ಥೆಗಳಾದ ED ಮತ್ತು CBI ಭಯದಿಂದ ಹಾಗೂ ಬಿಜೆಪಿಯ ‘ಆಪರೇಷನ್ ಲೋಟಸ್’ ತಂತ್ರಕ್ಕೆ ಬಲಿಯಾಗಿ ಇವರು ಪಕ್ಷಾಂತರ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ. ಸಂಸದರ ಈ ನಡೆಯನ್ನು ‘ಪಂಜಾಬ್ ಜನತೆಗೆ ಮಾಡಿದ ದ್ರೋಹ’ ಎಂದು ಕರೆದಿರುವ ಅರವಿಂದ್ ಕೇಜ್ರಿವಾಲ್, ಪಕ್ಷಾಂತರಿಗಳನ್ನು ‘ದೇಶದ್ರೋಹಿಗಳು’ ಎಂದು ಕಿಡಿಕಾರಿದ್ದಾರೆ.
ರಾಘವ್ ಚಡ್ಡಾ, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ಸ್ವಾತಿ ಮಾಲಿವಾಲ್, ಅಶೋಕ್ ಮಿತ್ತಲ್, ರಾಜೇಂದ್ರ ಗುಪ್ತಾ ಮತ್ತು ವಿಕ್ರಮ್‌ಜಿತ್ ಸಿಂಗ್ ಸಾಹ್ನಿ.ಪಕ್ಷದಲ್ಲಿ ಕೆಲಸ ಮಾಡಲು ಪೂರಕ ವಾತಾವರಣವಿಲ್ಲ ಮತ್ತು ನಾಯಕತ್ವದ ಮೇಲೆ ಅಸಮಾಧಾನವಿದೆ ಎಂದು ಸಂಸದರು ಆರೋಪಿಸಿದ್ದಾರೆ.ಬಿಜೆಪಿ ಎಂಬ ‘ರಾಜಕೀಯ ವಾಷಿಂಗ್ ಮೆಷಿನ್’ ಸೇರಿದ್ರಾ ರಾಘವ್ ಚಡ್ಡಾ? ಕೇಂದ್ರೀಯ ತನಿಖಾ ಸಂಸ್ಥೆಗಳ ಭಯದಿಂದ ಈ ಹಠಾತ್ ಬದಲಾವಣೆಯೇ? ಎಂದು ಎಎಪಿ ಆಕ್ರೋಶ ವ್ಯಕ್ತಪಡಿಸಿದೆ.
ಎಎಪಿ ಆಕ್ರೋಶ : ಇದು ಬಿಜೆಪಿಯ ಆಪರೇಷನ್ ಕಮಲದ ಭಾಗವಾಗಿದೆ ಎಂದು ಎಎಪಿ ಕಿಡಿಕಾರಿದೆ. ಪಂಜಾಬ್ ಮತ್ತು ದೆಹಲಿಯ ಜನರಿಗೆ ಈ ನಾಯಕರು ದ್ರೋಹ ಮಾಡಿದ್ದಾರೆ ಎಂದು ಪಕ್ಷದ ಮುಖಂಡ ಸಂಜಯ್ ಸಿಂಗ್ ದೂರಿದ್ದಾರೆ.ಈ ಏಳು ಸಂಸದರ ಸೇರ್ಪಡೆಯಿಂದ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 113ಕ್ಕೆ ಏರಿಕೆಯಾಗಿದ್ದರೆ, ಎಎಪಿ ಸಂಸದರ ಸಂಖ್ಯೆ ಕೇವಲ 3ಕ್ಕೆ ಕುಸಿದಿದೆ.
ಕರ್ನಾಟಕದಲ್ಲೂ ಪ್ರತಿಧ್ವನಿ
ಕರ್ನಾಟಕ ಎಎಪಿ ಘಟಕವು ಈ ಬೆಳವಣಿಗೆಯನ್ನು ಖಂಡಿಸಿದೆ. ಎಎಪಿ ಕರ್ನಾಟಕದ ಕಾರ್ಯಕರ್ತರು ಈ ಪಕ್ಷಾಂತರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದನ್ನು ಪ್ರಜಾಪ್ರಭುತ್ವದ ವಿರೋಧಿ ನಡೆ ಎಂದು ಬಣ್ಣಿಸುತ್ತಿದ್ದಾರೆ. ಸಂಸದರ ಸದಸ್ಯತ್ವ ರದ್ದತಿಗೆ ಒತ್ತಾಯಿಸಿ ಎಎಪಿ ಈಗಾಗಲೇ ರಾಜ್ಯಸಭಾ ಸಭಾಪತಿಗಳಿಗೆ ದೂರು ನೀಡಿದೆ.

