ರಾಮನಗರ : ಮಾಯಾಂಗನೆ ಮೋಹಕ್ಕೆ ಬಿದ್ದು ಯುವಕನೋರ್ವ 41 ಲಕ್ಷ ಕಳೆದುಕೊಂಡ ಘಟನೆ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಯ ಬ್ಲಾಕ್ ಮೇಲ್ಗೆ ಹೆದರಿ ಕನಕಪುರ ಮೂಲದ ಯುವಕ ರಾಜೇಶ್ 41 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ. ಫೇಸ್ ಬುಕ್ ನಲ್ಲಿ ಫೇಕ್ ಅಕೌಂಟ್ ನಲ್ಲಿ ಹುಡುಗಿಯರ ಹೆಸರಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿ ಯುವಕ ಮೋಸದ ಜಾಲಕ್ಕೆ ಬಿದ್ದಿದ್ದಾನೆ.
ಗೀತಾ ಸೆಕ್ಸಿ ಎಂಬ ಫೇಸ್ಬುಕ್ ಪ್ರೋಫೈಲ್ನಿಂದ ಯುವಕನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಚಾಟ್ ಮಾಡಲಾಗಿದೆ. ನಂತರ ಯುವಕತ ಫೋಟೋ, ಎಲ್ಲಾ ಮಾಹಿತಿಯನ್ನು ಪಡೆದು ಅಶ್ಲೀಲವಾಗಿ ಎಡಿಟ್ ಮಾಡಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಲಾಗಿದೆ. ನಂತರ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡಿ ನಿರಂತರವಾಗಿ 41 ಲಕ್ಷ ಹಣ ಹಾಕಿಸಿಕೊಂಡಿದ್ದಾರೆ. ಕೊನೆಗೆ ನೊಂದ ಯುವಕ ರಾಜೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.