HomeIndiaಕೇಕ್‌ ಖರೀದಿಗೆ ಹಣವಿಲ್ಲದಿದ್ದರೇನಂತೆ ಸಂಭ್ರಮಕ್ಕಿಲ್ಲ ಕೊರತೆ; ಭಾವುಕರನ್ನಾಗಿಸುತ್ತೆ ಬಡ ಹುಡುಗನ ಹುಟ್ಟುಹಬ್ಬದಾಚರಣೆ ವಿಡಿಯೋ

ಕೇಕ್‌ ಖರೀದಿಗೆ ಹಣವಿಲ್ಲದಿದ್ದರೇನಂತೆ ಸಂಭ್ರಮಕ್ಕಿಲ್ಲ ಕೊರತೆ; ಭಾವುಕರನ್ನಾಗಿಸುತ್ತೆ ಬಡ ಹುಡುಗನ ಹುಟ್ಟುಹಬ್ಬದಾಚರಣೆ ವಿಡಿಯೋ

ಪ್ರತಿಯೊಬ್ಬರಿಗೂ ಅವರ ಹುಟ್ಟುಹಬ್ಬ ಅಂದ್ರೆ ತುಂಬಾನೆ ಸ್ಪೆಷಲ್ . ಹಾಗೆ ಇಲ್ಲೊಬ್ಬ ಹುಡುಗ ಮನೆಯಲ್ಲಿ ಕೇಕ್ ಕೊಳ್ಳಲು ಹಣವಿಲ್ಲದಿದ್ದರು, ತನ್ನ ಮನಸ್ಸಿಗೆ ಸಂತೋಷ ಸಿಗುವ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಿರುವ ರೀತಿ ಎಲ್ಲರ ಗಮನ ಸೆಳೆದಿದೆ.

ಆ ಹುಡುಗನ ಮುಖದಲ್ಲಿರುವ ಸಂತೋಷ ನೋಡಿದ್ರೆ ತಿಳಿಯುತ್ತೆ, ಬತ೯ಡೆ ಆಚರಣೆಗೆ ಕೇಕ್ ಮುಖ್ಯ ಅಲ್ಲ, ಸಂಭ್ರಮಿಸೊ ಮನಸು ಮುಖ್ಯ ಅನ್ನೋದು. ವಿಧವಿಧವಾದ ರೀತಿಯ ಕೇಕ್ ತಂದು ಆಡಂಬರದಿಂದ ಹುಟ್ಟುಹಬ್ಬ ಆಚರಿಸೊ ಇವತ್ತಿನ ದಿನಗಳಲ್ಲಿ, ಈ ಹುಡುಗ ಮನೆಯಲ್ಲಿರುವ ಸಿಹಿಯನ್ನ ಮನೆ ಹಿರಿಯರೊಂದಿಗೆ ಹಂಚಿ ಸಂಭ್ರಮಿಸೊದನ್ನ ನೋಡೊಕೆ ತುಂಬಾ ಖುಷಿ ಕೊಡುತ್ತೆ.

ಬಡತನವನ್ನು ಮರೆಯಾಗಿಸಿದೆ, ಜನುಮದಿನದ ಸಿರಿತನ. ಇದನ್ನೆ ಅಲ್ವಾ ಹೇಳೊದು ಇದ್ದುದ್ದರಲ್ಲಿ ಖುಷಿಯಾಗಿರೊದು ಅಂತ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular