ಕಲಬುರಗಿ : ಮಿನಿ ವಿಧಾನಸೌಧದ ಬಳಿ ಘೋರ ದುರಂತ ಸಂಭವಿಸಿದ್ದು, ಬಾವಿಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.
ಮೃತ ಬಾಲಕರನ್ನು ಕುಶಾಲ್ ಚನ್ನಪ್ಪ (8) ರಾಜು ಚನ್ನಪ್ಪ (14) ಎಂದು ಗುರುತಿಸಲಾಗಿದೆ. ಬಾಲಕರು ಒಂಟಿ ಕಮಾನ್ ನಿಂದ ಕುರಿ ಕಾಯಲು ಮಿನಿ ವಿಧಾನಸೌಧದ ಬಳಿ ಬಂದಿದ್ದರು. ಈ ವೇಳೆ ಬಾವಿಗೆ ಇಳಿಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಶವಗಳನ್ನು ಮೇಲಕ್ಕೆ ಎತ್ತಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:ಮಿನಿ ವಿಧಾನಸೌಧ
