HomeEntertainment'ಕಾಂಗರೂ' ಚಿತ್ರದಿಂದ ಬಂತು ತಾಯಿ ಕುರಿತ ಹಾಡು

‘ಕಾಂಗರೂ’ ಚಿತ್ರದಿಂದ ಬಂತು ತಾಯಿ ಕುರಿತ ಹಾಡು

ಆದಿತ್ಯ ಅಭಿನಯದ ಕಿಶೋರ್ ಮೇಗಳಮನೆ ನಿರ್ದೇಶನದ ಬಹುನಿರೀಕ್ಷಿತ ‘ಕಾಂಗರೂ’ ಚಿತ್ರದ ಲಿರಿಕಲ್ ಹಾಡೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ತಾಯಿಗಿಂತ ದೇವರು ಭೂಮಿ ಮೇಲೆ ಎಲ್ಲಿದೆ’ ಎಂಬ ಈ ಹಾಡು ಸಾಧು ಕೋಕಿಲ ಅವರ ಧ್ವನಿಯಲ್ಲಿ ತುಂಬಾ ಸುಮಧುರವಾಗಿ ಮೂಡಿ ಮೂಡಿ ಬಂದಿದೆ. ಸಾಧು ಕೋಕಿಲ ಅವರೇ ಸಂಗೀತ ಸಂಯೋಜನೆ ನೀಡಿದ್ದು, ಕೆ. ಕಲ್ಯಾಣ್ ಸಾಹಿತ್ಯವಿದೆ.

ಈ ಚಿತ್ರದಲ್ಲಿ ಆದಿತ್ಯ ಸೇರಿದಂತೆ ರಂಜನಿ ರಾಘವನ್, ಕರಿಸುಬ್ಬು, ನಾಗೇಂದ್ರ, ಗೌತಮ್, ಶಿವಮಣಿ, ಸ್ಪಂದನ ಪ್ರಸಾದ್, ಸುಬ್ಬಲಕ್ಷ್ಮಿ, ಅಶ್ವಿನ್ ಹಾಸನ್ ಪ್ರಶಾಂತ್ ನಟನ ತೆರೆ ಹಂಚಿಕೊಂಡಿದ್ದು, ಅರ್ಜುನ್ ಕಿಟ್ಟು ಸಂಕಲನ, ಬಂಡೆ ಚಂದ್ರು ಸಾಹಸ ನಿರ್ದೇಶನವಿದೆ. ಚನ್ನಕೇಶವ, ನರಸಿಂಹಮೂರ್ತಿ, ಚಕ್ರಬಾವಿ, ರಮೇಶ್ ಬಂಡೆ, ಸ್ವಾಮಿ ಮತ್ತು ಕೆಜಿಆರ್ ಗೌಡ ನಿರ್ಮಾಣ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular